ಹೆಣ್ಣೂರು ಠಾಣೆ ಪೊಲೀಸ್ ಕಾನ್ಸ್ ಟೇಬಲ್ ಗೆ ಕೊರೋನಾ ಸೋಂಕು…

Promotion

ಬೆಂಗಳೂರು,ಜೂ,10,2020(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದು ಈ ನಡುವೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗೆ ಕೊರೋನಾ ಸೋಂಕು ಪತ್ತೆಯಾಗಿದೆ.

ಹೆಣ್ಣೂರು ಪೊಲೀಸ್ ಠಾಣೆಯ 32 ವರ್ಷದ ಕಾನ್ಸ್ ಟೇಬಲ್ ಗೆ ಕೊರೋನಾ ಸೋಂಕು ಪತ್ತೆಯಾಗಿದ್ದು ಪೊಲೀಸ್ ಠಾಣೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.  ಕೊರೋನಾ ಸೋಂಕಿತ ಕಾನ್ಸ್ ಟೇಬಲ್ ಕೋರ್ಟ್ ಪಿಸಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾನ್ಸ್ ಟೇಬಲ್ ಪತ್ನಿ ಮಗುವಿನ ಜತೆ ವಾಸವಾಗಿದ್ದರು.

ಇದೀಗ ಕೊರೋನಾ ಸೋಂಕು ಪತ್ತೆ ಹಿನ್ನೆಲೆ ಕಾನ್ಸ್ ಟೇಬಲ್ ಪತ್ನಿ ಮಗು ಹಾಗೂ 8 ಪೊಲೀಸ್ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಠಾಣೆಯಲ್ಲಿನ ಎಲ್ಲಾ ಸಿಬ್ಬಂದಿಗಳನ್ನ ಹೊರಗೆ ಕಳುಹಿಸಿ ಠಾಣೆಗೆ ಬಿಬಿಎಂಪಿ ಸಿಬ್ಬಂದಿ ಸ್ಯಾನಟೈಸ್ ಮಾಡಿದ್ದಾರೆ.

Key words: Corona -infection – Hennur -police station-constable