ಕೊರೋನಾದಿಂದ ಬಳಲುತ್ತಿರುವ ಶಾಸಕ ನಾರಾಯಣರಾವ್ ಸ್ಥಿತಿ ಚಿಂತಾಜನಕ…

Promotion

ಬೆಂಗಳೂರು,ಸೆಪ್ಟಂಬರ್,24,2020(www.justkannada.in): ಕೊರೋನಾ ಸೋಂಕಿನಿಂದ ಬಳಲುತ್ತಿರುವ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣರಾವ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.jk-logo-justkannada-logo

ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಶಾಸಕ ನಾರಾಯಣರಾವ್ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.corona-infected-mla-narayanarao-critical

ನಾರಾಯಣರಾವ್ ಅವರಿಗೆ ನ್ಯೂಮೊನಿಯಾ ಬಿಪಿ, ಶುಗರ್ ಇದೆ. ಅನಾರೋಗ್ಯ ಹಿನ್ನೆಲೆ ಯಲ್ಲಿ ಬಸವ ಕಲ್ಯಾಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಳೆದ 1 ತಿಂಗಳ ಹಿಂದೆ ದಾಖಲಾಗಿದ್ದರು.  ಇದೀಗ ಅವರ ಆರೋಗ್ಯ ಗಂಭೀರವಾಗಿದೆ ಎನ್ನಲಾಗಿದೆ.

Key words: Corona- infected -MLA -Narayanarao – critical