ಮೈಸೂರು ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ: ನಾಳೆಯಿಂದ ಹೆಚ್.ಡಿ ಕೋಟೆ ಪ್ರವಾಸೋದ್ಯಮಕ್ಕೆ ನಿರ್ಬಂಧ…

Promotion

ಮೈಸೂರು,ಜು,9,2020(www.justkannada.in): ಮೈಸೂರು ಜಿಲ್ಲೆಯಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಗ್ರಾಮೀಣ ಭಾಗಕ್ಕೂ ಕೊರೋನಾ ಹಬ್ಬುತ್ತಿದೆ.  ಈ ಹಿನ್ನೆಲೆ ಕೊರೋನಾ ಹರಡುವುದನ್ನ ತಡೆಗಟ್ಟಲು  ಮೈಸೂರು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.

 ಕೊರೋನಾ ಹೆಚ್ಚಳ ಹಿನ್ನೆಲೆ ನಾಳೆಯಿಂದ‌ ಎಚ್ ಡಿ ಕೋಟೆ ಪ್ರವಾಸೋದ್ಯಮಕ್ಕೆ ನಿರ್ಬಂಧ ವಿಧಿಸಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್.ಬಿ.ಶಂಕರ್ ಆದೇಶ ಹೊರಡಿಸಿದ್ದಾರೆ.  ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್.ಡಿ.ಕೋಟೆ ತಾಲೂಕಿನ ಎಲ್ಲಾ ಹೋಂಸ್ಟೇ, ರೆಸಾರ್ಟ್, ಹೊಟೇಲ್, ಲಾಡ್ಜ್, ವಸತಿ ಗೃಹಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ, ಇನ್ನು ಮುಂದೆ ಜಿಲ್ಲೆಯ ಹೊರಭಾಗದ ಪ್ರವಾಸಿಗರಿಂದ ಮುಂಗಡ ಬುಕ್ಕಿಂಗ್ ಸ್ವೀಕರಿಸದಂತೆಯೂ ಸೂಚಿಸಲಾಗಿದೆ. ಹೊಸ ಪ್ರವಾಸಿಗರಿಗೆ ಬುಕಿಂಗ್ ಮಾಡಿಕೊಳ್ಳದಂತೆ ಡಿಸಿ ಅಭಿರಾಂ ಜೀ ಶಂಕರ್ ಆದೇಶ ಹೊರಡಿಸಿದ್ದಾರೆ.Corona- increase -Restriction - tourism – HD Kote- mysore DC

Corona- increase -Restriction - tourism – HD Kote- mysore DC

ಇನ್ನು ಈಗಾಗಲೇ ಪ್ರವಾಸಿ ತಾಣಗಳಲ್ಲಿ ತಂಗಿರುವ ಪ್ರವಾಸಿಗರಿಗೆ ಅವರು ಬುಕ್ಕಿಂಗ್ ಮಾಡಿರುವ ಅವಧಿ ಪೂರ್ಣಗೊಳ್ಳುವವರೆಗೆ ತಂಗಲು ಅವಕಾಶ ನೀಡಿ ಅವಧಿ ಪೂರ್ಣಗೊಳ್ಳುವವರೆಗೆ ಕಾಯುವಂತೆ ಸೂಚಿಸಲಾಗಿದೆ.

ಎಚ್ ಡಿ ಕೋಟೆ ವ್ಯಾಪ್ತಿಗೆ ಒಳಪಡುವ ಬಂಡೀಪುರ, ನಾಗರಹೊಳೆ ಅರಣ್ಯ ವ್ಯಾಪ್ತಿಯ ಸಫಾರಿಗಳಿಗೂ ಈ ನಿರ್ಬಂಧ ಅನ್ವಯವಾಘಲಿದೆ.  ಹೊರಗಿನ ಪ್ರವಾಸಿಗ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜುಲೈ 10 ರಿಂದ ಮುಂದಿನ ಆದೇಶದವರೆಗೂ ನಿರ್ಬಂಧ ವಿಧಿಸಿ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಆದೇಶ ಹೊರಡಿಸಿದ್ದಾರೆ.

Key words: Corona- increase -Restriction – tourism – HD Kote- mysore DC