ಮೈಸೂರಿನಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ: ರ್ಯಾಪಿಡ್ ಟೆಸ್ಟ್ ಕೇಂದ್ರಗಳನ್ನ ಹೆಚ್ಚಿಸಿದ ಜಿಲ್ಲಾಡಳಿತ…

Promotion

ಮೈಸೂರು,ಜು,27,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ರ್ಯಾಪಿಡ್ ಟೆಸ್ಟ್ ಕೇಂದ್ರಗಳನ್ನ ಹೆಚ್ಚಿಳ ಮಾಡಿದೆ.jk-logo-justkannada-logo

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ಇಂದಿನಿಂದ ನಾಲ್ಕು ಭಾಗಗಳಲ್ಲಿ ರ್ಯಾಪಿಡ್ ಟೆಸ್ಟ್ ನಡೆಸಲಾಗುತ್ತದೆ. ಮೈಸೂರಿನ ಕೆ.ಆರ್ ಕ್ಷೇತ್ರದ ನಾಚನಹಳ್ಳಿ ಪಾಳ್ಯ, ಚಾಮರಾಜ ಕ್ಷೇತ್ರದ ಕೈಲಾಸಪುರಂ, ಮಂಡಿ ಮೊಹಲ್ಲಾ ಮತ್ತು ಲಷ್ಕರ್ ಮೊಹಲ್ಲಾದಲ್ಲಿ ರ್ಯಾಪಿಡ್ ಟೆಸ್ಟ್ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.

ಎನ್. ಆರ್ ಕ್ಷೇತ್ರದಲ್ಲಿ ರ್ಯಾಪಿಡ್ ಟೆಸ್ಟ್ ಸ್ಥಗಿತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿ ಅಭಿರಾಂ ಜೀ ಶಂಕರ್, ಕಿಟ್ ಗಳ ಕೊರತೆಯಿಂದ ರ್ಯಾಪಿಡ್ ಟೆಸ್ಟ್ ಸ್ಥಗಿತವಾಗಿಲ್ಲ. ಮೈಸೂರಿನಲ್ಲಿ ಕಿಟ್ ಕೊರತೆ ಇಲ್ಲ. ಟೆಸ್ಟಿಂಗ್ ವೇಳೆ ಹೆಚ್ಚಿನ ಸಂಪರ್ಕ ಕಡಿತಗೊಳಿಸುವ ಸಲವಾಗಿ ರ್ಯಾಪಿಡ್ ಗೆ ಬ್ರೇಕ್ ನೀಡಲಾಗಿತ್ತು. ಜೊತೆಗೆ ಆರೋಗ್ಯ ಸಿಬ್ಬಂದಿಗೆ ಒತ್ತಡ ತಗ್ಗಿಸಲು ವಿರಾಮ ನೀಡಲಾಗಿತ್ತು. ಸತತವಾಗಿ ರ್ಯಾಪಿಡ್ ಟೆಸ್ಟ್ ಮಾಡಿದ್ರಿಂದ ಎರಡು ದಿನಗಳ ಕಾಲ ಬ್ರೇಕ್ ನೀಡಲಾಗಿತ್ತು. ಇಂದಿನಿಂದ ಮತ್ತೆ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಈ ಪತ್ತೆ ಕಾರ್ಯಕ್ಕೆ ಯಾವುದೇ ಕಿಟ್ ಗಳ ಕೊರತೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.corona-increase-mysore-increased-rapid-test-centers

ಬೆಂಗಳೂರಿನ್ನ ಹೊರತುಪಡಿಸಿದ್ರೆ ಮೈಸೂರಿಗೆ ಹೆಚ್ಚು ರ್ಯಾಪಿಡ್ ಆ್ಯಂಟಿಜನ್ ಟಸ್ಟ್ ಕಿಟ್ ಸಿಕ್ಕಿದೆ‌. ಪ್ರತಿನಿತ್ಯ 1200ಕ್ಕೂ ಜನರ ಟೆಸ್ಟ್ ನಡೆಯುತ್ತಿದೆ. ಟೆಸ್ಟಿಂಗ್ ಪ್ರಮಾಣ ಹೆಚ್ಚಾದ ಹಿನ್ನಲೆ. ಪಾಸಿಟಿವ್ ಕೇಸ್ ಹೆಚ್ಚಾಗಿದೆ. ಶೇಕಡಾವಾರು ನೋಡೋದಾದ್ರೆ ಮುಂಚಿನಷ್ಟೇ ಪಾಸಿಟಿವ್ ಕೇಸ್ ಬರ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜೀ ಶಂಕರ್ ತಿಳಿಸಿದರು.

Key words: Corona- Increase – Mysore-Increased -Rapid Test -Centers.