ಕೊರೋನಾ ಹೆಚ್ಚಳ: ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಶಾಸಕ ತನ್ವೀರ್ ಸೇಠ್ ಅಸಮಾಧಾನ…

Promotion

ಮೈಸೂರು,ಮೇ,1,2021(www.justkannda.in): ದೇಶ ಮತ್ತು ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಈ ಕುರಿತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk

ಮೈಸೂರಿನಲ್ಲಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಭಾರತದಲ್ಲಿ ನಿನ್ನೆ ಒಂದೇ ದಿನ 4 ಲಕ್ಷ ಕೊರೊನಾ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಸರ್ಕಾರ ತೆಗೆದುಕೊಂಡ ಕ್ರಮದಲ್ಲಿ ಅನುಭವದ ಕೊರತೆ ಎಂದು ಹೇಳಬಹುದು. ಆದರೆ ಕೊರೊನಾ ಹರಡುವಿಕೆಯ ಬಗ್ಗೆ ಅನುಭವವಿದ್ದರೂ ಸರ್ಕಾರ ವಿಫಲವಾಗಿದೆ. ಆರೋಗ್ಯ ತಜ್ಞರು ಫೆಬ್ರವರಿಯಲ್ಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆದರೆ ಸರ್ಕಾರ ಅದನ್ನು ನಿರ್ಲಕ್ಷಿಸಿರುವುದು ಇಂದು ಕೊರೊನಾ ಗಂಭೀರತೆ ಪಡೆದುಕೊಳ್ಳಲು ಕಾರಣವಾಗಿದೆ ಎಂದು ಆರೋಪಿಸಿದರು.

ಇನ್ನು ಮೈಸೂರಿನಲ್ಲಿ ಒತ್ತಡ ಹೆಚ್ಚಳವಾಗಿದೆ. ಎರಡನೇ ಅಲೆಯಲ್ಲಿ ಬಹಳ ದೊಡ್ಡ ಸವಾಲಿರುವುದು ಆಕ್ಸಿಜನ್. ಮೈಸೂರು ಜಿಲ್ಲೆಯಲ್ಲಿ 7 ಮೆಟ್ರಿಕ್ ಟನ್ ಸಾಮರ್ಥ್ಯ ಇದ್ದು ಎಲ್ಲಾ ರೀತಿಯಲ್ಲೂ ಸಹಕಾರಿಯಾಗಿತ್ತು. ಇದೀಗ 22 ಮೆಟ್ರಿಕ್ ಟನ್ ಆಕ್ಸಿಜನ್  ಇದ್ದರೂ ಸಹ ಅದು ಸಾಕಾಗುತ್ತಿಲ್ಲ. ಪ್ರಸ್ತುತ ಮೈಸೂರಿಗೆ 30 ರಿಂದ 35 ಮೆಟ್ರಿಕ್ ಟನ್  ಆಕ್ಸಿಜನ್ ಬೇಕಾಗಿದೆ. ಇಷ್ಟಾದರೂ ರಾಜ್ಯ ಸರ್ಕಾರ ವೈದ್ಯಕೀಯ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ನಮಗೆ ಆಕ್ಸಿಜನ್‌ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚು ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.corona-increase-mla-tanveer-saith-outraged-governments-negligence

ವೈದ್ಯಕೀಯ ಸಿಬ್ಬಂದಿ ಕಡಿಮೆ ಇರುವುದರಿಂದ ಕಳೆದ 10 ದಿನಗಳ ಹಿಂದೆ ಆರೋಗ್ಯ ಸಚಿವರು ಘೋಷಣೆ ಮಾಡಿದ್ದರು. ಆದರೆ ಇಂದಿನವರೆಗೂ ನೋಟಿಫಿಕೇಷನ್ ಮಾಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಆರೋಗ್ಯ ಸಿಬ್ಬಂದಿಯನ್ನು ದೂಷಿಸುವುದು ಬೇಡ. ನಮ್ಮಲ್ಲಿ ವೈದ್ಯರ ಕೊರತೆ ಇರುವುದರಿಂದ ವೈದ್ಯರನ್ನೇ ಟಾರ್ಗೇಟ್ ಮಾಡಿ ಮಾತನಾಡುವುದು ಬೇಡ. ಎನ್.ಆರ್ ಕ್ಷೇತ್ರದಲ್ಲಿ ಆರೋಗ್ಯ ಮಿತ್ರ ಎಂದು ಕಾರ್ಯಕ್ರಮ ಮಾಡುತ್ತಿದ್ದೇನೆ. ಎನ್.ಆರ್ ಕ್ಷೇತ್ರದಲ್ಲಿರುವ  ಕಾರ್ಮಿಕರ ಆಸ್ಪತ್ರೆಯನ್ನು ಬಳಸಿಕೊಂಡು ಆರೋಗ್ಯ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ. ಆ ಮೂಲಕ ರೋಗಿಗಳಿಗೆ ಅಗತ್ಯ ಸಲಹೆ ಮತ್ತು ಟೆಲಿ‌‌ ಮೆಡಿಷನ್ ನೀಡಲು ಮುಂದಾಗಿದ್ದೇವೆ. ಜಿಲ್ಲಾಡಳಿತದ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ಇನ್ನೆರಡು ಕ್ಷೇತ್ರಗಳಲ್ಲೂ ಈ ಕಾರ್ಯಕ್ರಮ ಮಾಡಲು ಜಿಲ್ಲಾಡಳಿತ ಮುಂದಾಗಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

Key words: Corona- increase-MLA -Tanveer Saith – outraged – government’s -negligence.