ಕೊರೋನಾ ಭೀತಿಯಿಂದ ಬಂದ್ ಹಿನ್ನೆಲೆ: ಸಂಕಷ್ಟಕ್ಕೆ ಸಿಲುಕಿರುವ ಬೀದಿಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್…

Promotion

ಬೆಂಗಳೂರು,ಮಾ,19,2020(www.justkannada.in):  ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯದಲ್ಲಿ ಮಾರ್ಚ್ 31ರವರೆಗೆ ಬಂದ್ ಮಾಡಲಾಗಿದ್ದು ಇದರಿಂದ ಬೀದಿ ಬದಿ ವ್ಯಾಪಾರದವರಿಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಅಂಥವರಿಗೆ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ವೈರಸ್ ಆತಂಕ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ, ಕೊರೋನಾ ಸೋಂಕು ಎಫೆಕ್ಟ್ ಇಡಿ ಜಗತ್ತಿಗೆ ತಟ್ಟಿದೆ. ಇದಿರಂದ ಬ್ಯುಸಿನೆಸ್ ಮ್ಯಾನ್ ಗಳಿಗೆ ಬೀದಿಬದಿ ವ್ಯಾಪಾರಿಗಳು, ಭಾರಿ ಹೊಡೆತ ತಿಂದಿದ್ದಾರೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ  ಬೀದಿಬದಿ ವ್ಯಾಪಾರಿಗಳಿಗೆ ನೆರವು ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಸಿಎಂ ಜತೆ ಚರ್ಚಿಸಲಾಗಿದೆ ಎಂದು ಹೇಳಿದರು.

ಇನ್ನು ವಾಹನಗಳ ಇಎಂಐ ಮುಂದೂಡಲು ಸೂಚನೆ ನೀಡಲಾಗಿದೆ.  ಈ ಬಗ್ಗೆ ಬ್ಯಾಂಕರ್ಸ್ ಜತೆ ಮಾತನಾಡುತ್ತೇವೆ. ಈ ಮಧ್ಯೆ ಏರ್ ಪೋರ್ಟ್ ಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸದಂತೆ ಸೂಚಿಸಿದ್ದೇವೆ. ರಾಜ್ಯದ ಒಳಿತಿಗಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.

ಕೊರೋನಾ ಭೀತಿಯಿಂದಾಗಿ ರಾಜ್ಯದಲ್ಲಿ ಸಿನಿಮಾ ಥಿಯೇಟರ್, ಮಾಲ್ ಗಳು, ಶಾಲಾಕಾಲೇಜುಗಳು, ಮದುವೆ, ಸಭೆ ಸಮಾರಂಭಗಳನ್ನ ಮಾರ್ಚ್ 31ರವರಗೆ ಬಂದ್ ಮಾಡಲಾಗಿದೆ. ಹೀಗಾಗಿ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Key words:  Corona- Horror- Good news – troubled- streetside-trader-minister- CT Ravi