ಕೊರೊನಾ ಎಫೆಕ್ಟ್: ಭಾರತ-ದ.ಆಫ್ರಿಕಾ ಏಕದಿನ ಸರಣಿ ರದ್ದು

Promotion

ಬೆಂಗಳೂರು, ಮಾರ್ಚ್ 14, 2020 (www.justkannada.in): ಕೊರೋನಾವೈರಸ್ ನಿಂದಾಗಿ ಭಾರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಸರಣಿ ರದ್ದಾಗಿದೆ. ಮೊದಲ ಪಂದ್ಯ ಏಕದಿನ ಮಳೆಯಿಂದಾಗಿ ರದ್ದಾಗಿತ್ತು.

ಉಳಿದ ಎರಡು ಏಕದಿನ ಪಂದ್ಯ ಲಕ್ನೋ ಮತ್ತು ಕೋಲ್ಕೊತ್ತಾದಲ್ಲಿ ನಡೆಯಬೇಕಿತ್ತು. ಮೊದಲಿಗೆ ಈ ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು.

ಆದರೆ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಆಫ್ರಿಕಾ ಕ್ರಿಕೆಟಿಗರು ಸರಣಿ ಮುಂದುವರಿಸಲು ಹಿಂದೇಟು ಹಾಕಿದ್ದಾರೆ.

ಕೊರೋನಾ ಭೀತಿ ತಗ್ಗಿದ ಮೇಲೆ ಉಳಿದ ಪಂದ್ಯಗಳನ್ನು ಆಡಲು ಮತ್ತೆ ಆಫ್ರಿಕಾ ಕ್ರಿಕೆಟಿಗರು ಭಾರತಕ್ಕೆ ಬರಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.