ಒಮಿಕ್ರಾನ್ ಭೀತಿ ನಡುವೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆ.

Promotion

ನವದೆಹಲಿ,ಡಿಸೆಂಬರ್,7,2021(www.justkannada.in): ಒಮಿಕ್ರಾನ್ ಭೀತಿ ನಡುವೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 6,822 ಹೊಸ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಒಂದೇ ದಿನದಲ್ಲಿ 6,822 ಹೊಸ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು,  ಕಳೆದ 558 ದಿನಗಳಲ್ಲೇ ಪತ್ತೆಯಾದ ಅತಿ ಕಡಿಮೆ ಪ್ರಕರಣಗಳಾಗಿವೆ. ಹಾಗೆಯೇ ಒಂದೇ ದಿನದಲ್ಲಿ 220 ಜನ  ಕೊರೋನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 4,73,757 ಕ್ಕೆ ಏರಿಕೆಯಾಗಿದೆ.

24 ಗಂಟೆಯಲ್ಲಿ 10004 ಜನರು ಕೋವಿಡ್ ನಿಂದ ಗುಣಮುಖರಾಗಿದ್ದು ದೇಶದಲ್ಲಿ 95014 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಈವರೆಗೆ 3,40,79,612 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕಳೇದ 24 ಗಂಟೆಯಲ್ಲಿ 79,39,038 ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 1,28,76,10,590 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

Key words: Corona- declines – country – Omicron

ENGLISH SUMMARY…

Number of COVID patients reduce amidst fear of Omicron in India
New Delhi, December 7, 2021 (www.justkannada.in): Amidst the fear of the Omicron variant in the country, the number of COVID patients has reduced. 6,822 new COVID cases have been reported across the country in the last 24 hours.
As per the information provided by the Union Health Ministry, this is the lowest number of cases reported in the last 558 days. A total number of 220 people have lost their lives due to the pandemic in the last 24 hours, increasing the total tally to 4,73,757.
At the same time, 10,004 persons have recovered and the total number of active COVID cases stands at 95,014. The total number of people who have recovered and been discharged from the pandemic is 3,40,79,612 and the total number of people to whom vaccines have been administered in the last 24 hours is 79,39,038, increasing the number to 1,28,76,10,590.
Keywords: COVID-19 Pandemic/ Omicron/ cases reduce