ದೇಶದಲ್ಲಿ ಕಡಿಮೆಯಾಗುತ್ತಿರುವ ಕೊರೋನಾ ಆರ್ಭಟ: ಒಂದೇ ದಿನ 45,230 ಮಂದಿಗೆ ಕೋವಿಡ್ ಪಾಸಿಟಿವ್…

Promotion

ನವದೆಹಲಿ,ನವೆಂಬರ್,2,2020(www.justkannada.in):  ದೇಶದಲ್ಲಿ ದಿನೇ ದಿನೇ ಕೊರೋನಾ ಮಹಾಮಾರಿಯ ಆರ್ಭಟ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 45,230 ಕೋವಿಡ್ ಪ್ರಕರಣ ಪತ್ತೆಯಾಗಿದೆ.jk-logo-justkannada-logo

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ನಿನ್ನೆ ಒಂದೇ ದಿನ ಭಾರತದಲ್ಲಿ 45,230 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 82,29,313 ಕ್ಕೆ ಏರಿಕೆಯಾಗಿದೆ.corona-country-covid-positive-45230-single-day

ಇನ್ನು ಒಂದೇ ದಿನ ಕೊರೋನಾ ಸೋಂಕಿಗೆ 496 ಮಂದಿ ಬಲಿಯಾಗಿದ್ದು, ಈ ಮೂಲಕ ದೇಶದಲ್ಲಿ ಕೊರೊನಾಗೆ ಸಾವನ್ನಪ್ಪಿದವರ ಸಂಖ್ಯೆ 1,22,607 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರಗೆ 75,4,798 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೇ ಸದ್ಯ ದೇಶದಲ್ಲಿ 5,61,908 ಸಕ್ರಿಯ ಪ್ರಕರಣಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Corona –country-Covid positive – 45,230 – single day.