ಕೊರೋನಾ ವೈರಸ್ ಭೀತಿ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ….

Promotion

ಬೆಂಗಳೂರು,ಮಾ,20,2020(www.justkannada.in): ಒಂದೆಡೆ ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವ ಭೀತಿ ಹೆಚ್ಚಾಗಿದೆ. ಇನ್ನೊಂದೆಡೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆರಾಯ ಅಬ್ಬರಿಸಿದ್ದಾನೆ.

ಹೌದು, ಬೆಂಗಳೂರಿನ ಕೆಲವು ಕಡೆಗಳಲ್ಲಿ  ಮಳೆಯಾಗಿದೆ, ಶಾಂತಿನಹಗರ ರಿಚ್ಮಂಡ್ ಟೌನ್,  ಕೆ. ಆರ್ ಮಾರ್ಕೆಟ್, ವಿಲ್ಸನ್ ಗಾರ್ಡನ್, ಎಂಜಿ ರೋಡ್.  ಹೆಬ್ಬಾಳ ಜಕ್ಕೂರು, ಮತ್ತಿಕೆರೆ, ಜೆಸಿ ರೋಡ್,  ಸಂಪಂಗಿರಾಮನಗರ, ಮಹದೇವಪುರ ಸೇರಿ ಹಲವು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.

ನಾಳ್ಕು ದಿನಗಳಿಂದ ವಾತಾವರಣದಲ್ಲಿ ಬಾರಿ ಬದಲಾವಣೆಯಾಗಿದೆ.   ಕೋಲಾರ ,ಬೆಂಗಳೂರು , ಬೆಂಗಳೂರು ಗ್ರಾಮಾಂತರ ದಲ್ಲಿ ಮಳೆಯಾಗುತ್ತಿದೆ.  ಇಂದು ರಾತ್ರಿಯೂ ಬೆಂಗಳೂರಿನಲ್ಲಿ ಮಳೆ ಅಬ್ಬರಿಸಲಿದೆ  ನಾಳೆ ಮತ್ತು ನಾಡಿದ್ದು ಮಳೆ ಬರಲ್ಲ. ಮೋಡ ಕವಿದ ವಾತಾವರಣ ಇರುತ್ತೆ ಎಂದು ರಾಜ್ಯ  ನೈಸರ್ಗಿಕ ವಿಕೋಪ ಕೇಂದ್ರ ಮಾಹಿತಿ ನೀಡಿದೆ.

Key words: corona –bangalore- rain