ಕೊರೋನಾ 2ನೇ ಅಲೆಯಿಂದಾಗಿ ಮತ್ತೆ ಸಂಕಷ್ಟಕ್ಕೀಡಾದ ಮೃಗಾಲಯಗಳು: ಸಹಕಾರಕ್ಕೆ ಮನವಿ…

ಮೈಸೂರು,ಮೇ,8,2021(www.justkannada.in):  ಕೊರೋನಾ ಮೊದಲ ಅಲೆಯಲ್ಲಿ ಸಂಕಷ್ಟ ಅನುಭವಿಸಿದ್ದ ಮೃಗಾಲಯಗಳು ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿವೆ. ಕೊರೋನಾ 2ನೇ ಅಲೆಯಿಂದಾಗಿ ಮೃಗಾಲಯಗಳ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ.jk

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಮೈಸೂರು, ಬನ್ನೇರುಘಟ್ಟ ಮೃಗಾಲಯದ ಆದಾಯದಿಂದ ಬಾಕಿ ಮೃಗಾಲಯಗಳ ನಿರ್ವಹಣೆ ಆಗ್ತಿತ್ತು. ಈಗ ಎಲ್ಲವೂ ಕಂಪ್ಲೀಟ್‌ ಆಗಿ ಮುಚ್ಚಿವೆ. ಕಳೆದ ಬಾರಿಯ ಕೊರೊನಾ ಏಫೆಕ್ಟ್ನಿಂದ ಚೇತರಿಸಿಕೊಳ್ಳೊದೇ ಕಷ್ಟವಾಗಿತ್ತು. ಈಗ ಮತ್ತೆ ಕೊರೊನಾ ಎರಡನೇ ಅಲೆಯಿಂದ ಬಹಳ ತೊಂದರೆಯಾಗಿದೆ. ಮೃಗಾಲಯಗಳ ನಿರ್ವಹಣೆ ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಜೊತೆಗೆ ಪ್ರಾಣಿಪಕ್ಷಿ ಪ್ರಿಯರು, ಸಂಘ ಸಂಸ್ಥೆಗಳು, ಬ್ಯುಸಿನೆಸ್ ಮಾಡುವವರು, ಸಾರ್ವಜನಿಕರ ಆರ್ಥಿಕ ಸಹಾಯ ಬೇಕಿದೆ. ಪ್ರಾಣಿಪಕ್ಷಿಗಳ ಆಹಾರ, ನಿರ್ವಹಣೆಗೆ ಒಂದು ತಿಂಗಳಿಗೆ ಬರೋಬ್ಬರಿ ಎರಡು ಕೋಟಿ ಹಣಕ್ಕೂ ಹೆಚ್ಚು ಹೊಂದಿಸೋಕು. ಮೃಗಾಲಯ ಕಷ್ಟ ಪಡುತ್ತಿದ್ದು, ಸಿಬ್ಬಂದಿಗಳಿಗೆ ವೇತನ, ವಿದ್ಯುತ್, ನೀರು ಹಾಗೂ ಇತರೆ ವ್ಯವಸ್ಥೆಗೆ ಬೇಕಾಗಿರುವ ಹಣಕ್ಕೆ ಯಾವುದೇ ಆದಾಯ ಇಲ್ಲ.corona-2nd-wave-zoos-hardship-appeal-cooperation

ಕಳೆದ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬಹಳಷ್ಟು ಸಹಾಯ ಆಗಿತ್ತು. ಮೃಗಾಲಯಕ್ಕೆ ಮೂರುಕ್ಕಾಲು ಕೋಟಿಯಷ್ಟು ಆರ್ಥಿಕ ಸಹಾಯ ಆಗಿತ್ತು. ಜನರ ಸಹಕಾರ ಅಗತ್ಯ ಇಲ್ಲವಾದಲ್ಲಿ ಮೃಗಾಲಯಗಳ ನಿರ್ವಹಣೆಗೆ ಸಮಸ್ಯೆಯಾಗಲಿದೆ. ಟ್ಯಾಕ್ಸ್ ಪೆಯರ್ಸ್ ಮುಂದೆ ಬಂದು ಮೃಗಾಲಯಗಳಿಗೆ ಸಹಕಾರ ನೀಡಬೇಕು.ಕಳೆದ ಬಾರಿಯಂತೆ ಜನರ ಸಹಕಾರ ಬೇಕಿದೆ ಎಂದು ಮಹದೇವಸ್ವಾಮಿ  ತಿಳಿಸಿದ್ದಾರೆ. ಇನ್ನು ಪ್ರಾಣಿಪಕ್ಷಿಗಳ ದತ್ತು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Key words: Corona -2nd –wave- Zoo’s- hardship – appeal – cooperation .