ಟೀಂ ಇಂಡಿಯಾಗೆ ಕೂಲ್ ಕ್ಯಾಪ್ಟನ್ ‘ಫ್ರೀ’ ಮೆಂಟರ್ ! ಧೋನಿ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ

Promotion

ಬೆಂಗಳೂರು, ಅಕ್ಟೋಬರ್ 13, 2021 (www.justkannada.in): ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಮೆಂಟರ್ ಆಗಿ ನೇಮಕವಾಗಿರುವ ಕೂಲ್ ಕ್ಯಾಪ್ಟನ್ ಧೋನಿ ಉಚಿತವಾಗಿ ಕೆಲಸ ಈ ಕೆಲಸ ನಿರ್ವಹಿಸಲಿದ್ದಾರೆ.

ಯುಎಇನಲ್ಲಿ ಅಕ್ಟೋಬರ್ 17 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾಗೆ ಧೋನಿ ಮೆಂಟರ್ ಆಗಿ ಸಲಹೆ ನೀಡಲಿದ್ದಾರೆ.

ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ಹಂಚಿಕೊಂಡಿದ್ದಾರೆ. ಧೋನಿ ಉಪಸ್ಥಿತಿ ತಂಡದಲ್ಲಿ ಹೊಸ ಶಕ್ತಿ ತುಂಬಲಿದೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ತಂದುಕೊಟ್ಟ ಧೋನಿ ಉಪಸ್ಥಿತಿಯಿಂದ ತಂಡಕ್ಕೆ ಸಾಕಷ್ಟು ಅನುಕೂಲವಾಗಲಿದೆ.