ಟಿ-20 ವಿಶ್ವಕಪ್’ನಲ್ಲಿ ವರ್ಕೌಟ್ ಆಗುತ್ತಿದೆ ಕೂಲ್ ಕ್ಯಾಪ್ಟನ್ ಧೋನಿ ಮೆಂಟರಿಂಗ್ !

Promotion

ಬೆಂಗಳೂರು, ಅಕ್ಟೋಬರ್ 21, 2021 (www.justkannada.in): ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಭ್ಯಾಸ ಪಂದ್ಯದ ವೇಳೆ ಮೆಂಟರ್ ಕೆಲಸವನ್ನು ಧೋನಿ ಅದ್ಭುತವಾಗಿ ಮಾಡುತ್ತಿದ್ದಾರೆ ವೀಡಿಯೋ ವೈರಲ್ ಆಗಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನ ಅಭಿಯಾನ ಆರಂಭಿಸುವ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಜಯ ಸಾಧಿಸಿದೆ.

ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೆವರಿಟ್ ಎನಿಸಿದೆ. ಧೋನಿ ತಮಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಆಸ್ಟ್ರೇಲಿಯಾ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಬೌಂಡರಿ ಲೈನ್ ಆಚೆಗೆ ಧೋನಿ ಅವರು ರಿಷಭ್ ಪಂತ್​ಗೆ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡಿಸುತ್ತಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯುಎಇ ಪಿಚ್​ನಲ್ಲಿ ಅಂಡರ್ ಆರ್ಮ್ ಬೌಲಿಂಗ್ ಮಾಡಿ ಧೋನಿ ಅವರು ಪಂತ್​ಗೆ ವಿಕೆಟ್ ಕೀಪಿಂಗ್ ಮಾಡಿಸುತ್ತಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.