ವೋಟರ್ ಐಡಿ ಹಗರಣ ಹೊರ ಬರುತ್ತಿದ್ದಂತೆ ಕುಕ್ಕರ್ ಬ್ಲಾಸ್ಟ್ ಯಾಕೆ..? ಬಿಜೆಪಿಗೆ ಡಿ.ಕೆ ಶಿವಕುಮಾರ್ ಚಾಟಿ.

ಬೆಂಗಳೂರು,ಡಿಸೆಂಬರ್,15,2022(www.justkannada.in): ವೋಟರ್ ಐಡಿ ಹಗರಣ ಹೊರಬರುತ್ತಿದ್ದಂತೆ ಕುಕ್ಕರ್ ಸ್ಪೋಟ ಆಯಿತು. ಯಾಕೆ..?  ಕುಕ್ಕರ್ ಸ್ಪೋಟ ಮಾಡಿದವನು ಎಲ್ಲಿಂದ ಬಂದ  ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನೆ ಹಾಕುವುದರ ಮೂಲಕ ವೋಟರ್ ಐಡಿ ಪ್ರಕರಣ ಮುಚ್ಚಿ ಹಾಕಲು ಕುಕ್ಕರ್ ಬ್ಲಾಸ್ಟ್ ಷಡ್ಯಂತ್ರವನ್ನ ರೂಪಿಸಲಾಯಿತು ಎಂದು ಆರೋಪಿಸಿದರು.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷವನ್ನ ಭ್ರಷ್ಟಾಚಾರದ ಗಂಗೋತ್ರಿ ಎಂದರು. ಹಾಗಾದರೇ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಇದ್ದರೇ ಬಿಚ್ಚಿಡಿ ನೋಡೋಣ ಎಂದು ಸವಾಲು ಹಾಕಿದರು.  ವೋಟರ್ ಐಡಿ ಅಕ್ರಮ ಬಂದ ತಕ್ಷಣ ಕುಕ್ಕರ್ ಸ್ಪೋಟ ಆಯಿತು. ಕುಕ್ಕರ್ ಬ್ಲಾಸ್ಟ್ ಮಾಡಿದವನು ಎಲ್ಲಿಂದ ಬಂದ..?   ಕೇವಲ ಭಾವನೆಯಲ್ಲಿ ಬದುಕು ತುಂಬಿಸಲು ಹೊರಟಿದ್ದೀರಿ. ಯಾವುದೇ ತನಿಖೆ ಮಾಡದೇ ಉಗ್ರ ಅಂತಾ ಹೇಗೆ ಘೋಷಣೆ  ಮಾಡಿದ್ರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಲ್ಲಿ ಸಿಎಂ ಸ್ಙಾನಕ್ಕೆ ಪೈಪೋಟಿ ಇಲ್ಲ ನನ್ನ ಮತ್ತ ಸಿದ್ಧರಾಮಯ್ಯ ನಡುವೆ ಗೊಂದಲ ಇಲ್ಲ. ನಾವು ಕಿತ್ತಾಡಿಕೊಂಡಿಲ್ಲ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾವು ಈ ಬಾರಿ 136 ಸೀಟ್ ಗೆಲ್ಲುತ್ತೇವೆ. ಬಿಜೆಪಿ 68 ರಿಂದ 70 ಸೀಟ್ ಗೆಲ್ಲಬಹುದು ಅಷ್ಟೆ ಎಂದರು.

Key words:  cooker -blast – voter id- scam -came out- DK Shivakumar