ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಮೇಲಿನ ಲಾಠಿಚಾರ್ಜ್ ಗೆ ಮೈಸೂರಿನಲ್ಲಿ ಖಂಡನೆ

kannada t-shirts

ಮೈಸೂರು,ಆ,28,2020(www.justkannada.in): ಬೆಳಗಾವಿ ಜಿಲ್ಲೆಯ ಪೀರಣವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪುನರ್ ಪ್ರತಿಷ್ಠಾಪನೆ ವಿಚಾರಕ್ಕೆ ಸಂಭಂದಿಸಿದಂತೆ, ಕನ್ನಡಿಗರ ಮೇಲೆ ಲಾಠಿ ಚಾರ್ಜ್ ಮಾಡಿರುವ ಘಟನೆಯನ್ನ ಹಾಲುಮತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಮುಖಂಡರಾದ ಉಮೇಶ್ ಕೋಟೆ ಖಂಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಪೀರಣವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪುನರ್ ಪ್ರತಿಷ್ಠಾಪನೆ ವಿಚಾರಕ್ಕೆ ಸಂಭಂದಿಸಿದಂತೆ, ಕನ್ನಡಿಗರ ಮೇಲೆ ಲಾಠಿ ಚಾರ್ಜ್ ಮಾಡಿರುವ ಬಗ್ಗೆ ಮತ್ತು ಕನ್ನಡಿಗರ ಮೇಲೆ, ಕನ್ನಡ ಧ್ವಜದ ಮೇಲೆ ಚಪ್ಪಲಿಯನ್ನು ಎಸೆದಿರುವುದರ ಬಗ್ಗೆ ಮತ್ತು ಈ ವಿಚಾರವನ್ನು ಇಷ್ಟರ ಮಟ್ಟಿಗೆ ಬೆಳೆಯಲು ಬಿಟ್ಟ ರಾಜಕೀಯ ಕೈಗಳಿಗೆ ರಾಯಣ್ಣನ ಅಭಿಮಾನಿಗಳು ಕಟ್ಟು ಶಬ್ದಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಾಲುಮತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಮುಖಂಡರಾದ ಉಮೇಶ್ ಕೋಟೆ, ರಾಯಣ್ಣ ನಮ್ಮ ಕರುನಾಡಿನ ಮಗ ಅವರ ಪ್ರತಿಮೆಯನ್ನು ಸ್ಥಾಪಿಸಲು ಯಾರ ಅಪ್ಪಣೆ ಯಾಕೆ ಪಡೆಯಬೇಕು.? ಹಾಗೆ ಶಿವಾಜಿ ಮಹಾರಾಜರು ಕೂಡ ದೇಶದ ಮಗನೇ. ಅವರ ಬಗ್ಗೆಯೂ ನಮಗೆ ಪ್ರೀತಿ ಗೌರವ ಇದೆ ಆದರೆ ಈ ಇಬ್ಬರು ಮಹಾನ್ ವ್ಯಕ್ತಿಗಳನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿ ಕೊಳ್ಳುತ್ತಿರುವದು ಅಕ್ಷಮ್ಯ ಅಪರಾಧ. ಇಷ್ಟೆಲ್ಲಾ ಬೆಳವಣಿಗೆ ನಡೆದರೂ ಕೂಡಾ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಸಂಸದರು ಇದುವರೆಗೂ ಕೂಡಾ ಒಂದು ಹೇಳಿಕೆ ನೀಡದಿರುವುದು ಅವರು ಈ ಘಟನೆಯಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅನ್ನೋದಕ್ಕೆ ಹಿಡಿದ ಕೈ ಗನ್ನಡಿಯಾಗಿದೆ, ಇದು ಇಂದಿಗೆ ನಿಲ್ಲಲಿ, ಕನ್ನಡಿಗರು ಮತ್ತು ರಾಯಣ್ಣನ ಅಭಿಮಾನಿಗಳ ಮೇಲೆ ಹಾಕಿರುವ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆಯಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಎಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟಗಳೂ ಸೇರಿ ತೀವ್ರವಾಗಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕನ್ನಡಿಗರರ ವಿರುದ್ಧ ಪ್ರಕರಣ ದಾಖಲಿಸಿ, ಮರಾಠಿ ಪುಂಡರೊಂದಿಗೆ ಶಾಂತಿ ಸಭೆ ನಡೆಸಿರುವುದನ್ನೂ ಕೂಡಾ ತೀವ್ರವಾಗಿ ಖಂಡಿಸಿದ್ದಾರೆ.

key words: Controversy – statue – Sangolli rayanna- Kannadiga-  Mysore .

website developers in mysore