ಸ್ವಾತಂತ್ರ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರ: ಸಂಸದ ಅನಂತ್ ಕುಮಾರ್ ಹೆಗ್ಡೆ ಭೇಟಿ ಬಳಿಕ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು ಹೀಗೆ…

Promotion

ನವದೆಹಲಿ,ಫೆ,4,2020(www.justkannada.in): ಗಾಂಧೀಜಿ ಸ್ವಾತಂತ್ರ ಹೋರಾಟ ನಾಟಕ ಎಂದು ಸ್ವಾತಂತ್ರ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಸದ ಅನಂತ್ ಕುಮಾರ್ ಹೆಗ್ಡೆ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿ ಚರ್ಚಿಸಿದರು.

ದೆಹಲಿಯ  ಲೂದಿ ಎಸ್ಟೇಟ್ ನಲ್ಲಿರುವ ಅನಂತ್ ಕುಮಾರ್ ಹೆಗ್ಡೆ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಭೇಟಿಯಾಗಿದ್ದು ಸ್ವಾತಂತ್ರ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ಕರಿತು ಚರ್ಚಿಸಿದರು. ಅನಂತ್ ಕುಮಾರ್ ಹೆಗ್ಡೆ ಭೇಟಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ರಾಜಕೀಯ ಸ್ನೇಹಿತನಾಗಿ ನಾನು ಮನೆಗೆ ಬಂದಿದ್ದೆ. ಸ್ವಾತಂತ್ರ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರ ಕುರಿತು ಚರ್ಚಿಸಿದ್ದೇನೆ. ಹೈಕಮಾಂಡ್ ಗೆ ವರದಿ ನೀಡಲಾಗಿದೆ. ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದು ಹೇಳಿದರು.

ಇನ್ನು ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಅನಂತ್ ಕುಮಾರ್ ಹೆಗಡೆ ಕ್ಷಮೆ ಕೇಳಲು ನಕಾರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು ಚರ್ಚೆ ವೇಳೆ ನಳೀನ್ ಕುಮಾರ್ ಕಟೀಲ್ ಗೆ ಎಲ್ಲವನ್ನೂ ವಿವರಿಸಿದ್ದೇನೆ ಎಂದಿದ್ದಾರೆ. ಇನ್ನು ಕ್ಷಮೆ ಕೇಳುವ ಕುರಿತು ನಳೀನ್ ಕುಮಾರ್ ಕಟೀಲ್ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Key words: Controversial statement -freedom fighters-MP -Anant Kumar Hegde- Nalin Kumar Kateel