ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಭ್ರಷ್ಟಾಚಾರ ನಿಯಂತ್ರಣ ನಮ್ಮ ಮೊದಲ ಆದ್ಯತೆ-ಡಿಸಿಎಂ ಡಿ.ಕೆ ಶಿವಕುಮಾರ್.

Promotion

ಬೆಂಗಳೂರು,ಮೇ,30,2023(www.justkannada.in):  ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​  ಹೇಳಿದರು.

ಇಂದು ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಜಲಸಂಪನ್ಮೂಲ ಇಲಾಖೆ ಮೊದಲ ಸಭೆ ನಡೆಯಿತು. ಜಲಸಂಪನ್ಮೂಲ ಇಲಾಖೆ ಬಗ್ಗೆ ನನಗೆ ಅನುಭವವಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಅರಿವು ಇದೆ ಎಂದರು.

ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತೇವೆ. ಖಾಲಿಯಿರುವ ಎಲ್ಲಾ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮಕೈಗೊಳ್ಳಲಿದೆ, ಮೇಕೆದಾಟು ಯೋಜನೆಗೆ ಸಿಎಂ ಅನುದಾನ ಮೀಸಲಿಟ್ಟಿದ್ದರು. ಹಾಗೆಯೇ ಮಹದಾಯಿ ಯೋಜನೆ ಮುಂದುವರಿಸಲು ಕ್ರಮಕೈಗೊಳ್ಳುತ್ತೇವೆ. ಹಿಂದಿನ ಸರ್ಕಾರ ಏನು ಮಾಡಿತ್ತು ಎಂದು ಚರ್ಚೆ ಮಾಡುವುದಿಲ್ಲ. ರಾಜ್ಯದ ಜನತೆ ನಮ್ಮ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇವೆ  ಎಂದು ಹೇಳಿದರು.

Key words: Control – corruption – our first -priority-DCM- DK Shivakumar