ಗುತ್ತಿಗೆದಾರರ ಮೇಲೆ ದಾಳಿ ಆದರೆ ಕಾಂಗ್ರೆಸ್ ಗೆ ಏನು ಸಂಬಂಧ? ಬಿಜೆಪಿ ವಿರುದ್ಧ ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ.

Promotion

ಬೆಂಗಳೂರು,ಅಕ್ಟೋಬರ್,13,2023(www.justkannada.in):  ಗುತ್ತಿಗೆದಾರರ ಮೇಲೆ ಐಟಿ ವೇಳೆ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪಂಚರಾಜ್ಯ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಹಣ ಸಂಗ್ರಹ ಎಂದು ಬಿಜೆಪಿ ಆರೋಪಿಸಿದ್ದು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ ಪಾಟೀಲ್, ಗುತ್ತಿಗೆದಾರರ ಮೇಲೆ ದಾಳಿ ಆದರೆ ಕಾಂಗ್ರೆಸ್ ಗೆ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಗುತ್ತಿಗೆದಾರರ ಮೇಲೆ ದಾಳಿ ಆದರೆ ಕಾಂಗ್ರೆಸ್ ​ಗೆ ಏನು ಸಂಬಂಧ? ಸಿಎಂಗೆ ಇದನ್ನು ಲಿಂಕ್ ಮಾಡೋದಕ್ಕೆ ಬಿಜೆಪಿ ಬಳಿ ದಾಖಲೆ ಇದ್ಯಾ? ಇದು ಬಿಜೆಪಿ ಹಣ, ಜೆಡಿಎಸ್​ನವರ ಹಣ ಅಂತಾ ನಾನು ಹೇಳ್ತೇನೆ. ಸಿದ್ದರಾಮಯ್ಯಗೆ ಲಿಂಕ್ ಇದೆ ಅನ್ನೋದನ್ನು ಸಾಬೀತು ಮಾಡ್ತಾರಾ? ಎಂದು ಗುಡುಗಿದರು.

ಬಿಜೆಪಿ ಸರ್ಕಾರ ಬಜೆಟ್ ​ಗಿಂತ ವರ್ಕ್ ಆರ್ಡರ್ ಮಾಡಿ ಹೋಗಿದ್ದಾರೆ. ಕಮಿಷನ್ ಅನ್ನೋದು ಬಿಜೆಪಿ ಹಾಗೂ ಜೆಡಿಎಸ್ ​ಗೆ ಚೆನ್ನಾಗಿ ಗೊತ್ತಿದೆ. ಕಮಿಷನ್ ಎನ್ನೋದು ಕಾಂಗ್ರೆಸ್​ ನದ್ದಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದರು.

Key words: contractors – Congress-Minister -MB Patil – against -BJP.