100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಖಚಿತ- ಶಾಸಕ ತನ್ವೀರ್ ಸೇಠ್.

Promotion

ಮೈಸೂರು,ನವೆಂಬರ್,12,2022(www.justkannada.in):  ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನೇ ರದ್ಧು ಮಾಡಿದೆ. ಕೆಲವರು ಟಿಪ್ಪು ಸುಲ್ತಾನ್ ದೇಶ ಭಕ್ತ ಎಂದರೇ ಕೆಲವರು ಮತಾಂಧ ಎಂದು ಟೀಕಿಸುತ್ತಿದ್ದಾರೆ. ಈ ನಡುವೆಯೇ 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡುವುದು ಖಚಿತ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ತನ್ವೀರ್ ಸೇಠ್, 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಖಚಿತ . ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ.  ಚು ಅಥವಾ ಪಂಚಲೋಹ ಪ್ರತಿಮೆ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಮಾಡುತ್ತೇವೆ ಎಂದರು.

ಇಂದಿನ ಪರಿಸ್ಥಿತಿಯಲ್ಲಿ ಪ್ರತಿಮೆ ನಿರ್ಮಾಣ ಅನಿವಾರ್ಯವಾಗಿದೆ. ಪ್ರತಿಮೆಗೆ ಸ್ಥಾಪನೆಗೂ  ಮುನ್ನವೇ ಕೆಡುವುದಾಗಿ  ಹೇಳಿಕೆಗಳು ಬಂದಿವೆ. ಯಾರ ವಿರೋಧಕ್ಕೂ ನಾವು ಬಗ್ಗುವುದಿಲ್ಲ ಎಂದು ತನ್ವೀರ್ ಸೇಠ್ ಹೇಳಿದ್ದಾರೆ.

Key words: Construction – Tipu Sultan -statue – MLA -Tanveer Sait.