ಮಹಾಮಾರಿ ಕೊರೊನಾಗೆ ಕಾನ್ಸ್ ಟೇಬಲ್ ಬಲಿ

Promotion

ಬೀದರ್, ಆಗಸ್ಟ್, 21, 2020(www.justkannada.in) ; ಕೊರೊನಾ ಮಹಾಮಾರಿಗೆ ಕೊರೋನಾ ವಾರಿಯರ್ ಕಾನ್ಸ್ ಟೇಬಲ್ ಬಲಿಯಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

Constable-death- Bidar–Mahamari-Corona

ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೀದರ್ ನ ಖಡಕ ಚಿಂಚೋಳಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ರವೀಂದ್ರ ಅವರು ಆಗಸ್ಟ್ 15 ರಂದು ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರಯುತ್ತಿಲ್ಲ ಎಂದು ಪೋಷಕರಲ್ಲಿ ರವೀಂದ್ರ ಅವರು ಬೇಸರವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅದಲ್ಲದೇ, ಪೊಲೀಸ್ ಕಂಟ್ರೋಲ್ ರೂಂ ಗೂ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದರು. ಹೀಗಾಗಿ, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ  ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Key words : Constable-death- Bidar–Mahamari-Corona