ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಂಚು ನಡೆಸಿದ್ದರು-ನಿರಾಣಿ ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ್ ಆಕ್ರೋಶ.

Promotion

ವಿಜಯಪುರ,ಜನವರಿ,7,2023(www.justkannada.in): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕುಟುಂಬ ಹಾಗೂ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಮಾತನಾಡಿರುವ ಬಸನಗೌಡ ಪಾಟೀಲ್ ಯತ್ನಾಳ್,  ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಂಚು ರೂಪಿಸಿದ್ದರು. ಪಕ್ಷೇತರರಿಗೆ ಹಣ ನೀಡಿ ಬಿಜೆಪಿ ಸೋಲಿಸಲು ಹುನ್ನಾರ ನಡೆಸಿದ್ದರು.  ಕೋಟಿ  ಕೋಟಿ ಹಣ ಕಳಿಸಿಲ್ಲ ಹಣ ಕೊಟ್ಟಿಲ್ಲ ಎಂದು ಧರ್ಮಸ್ಥಳದಲ್ಲಿ ಆಣೆ ಮಾಡಲಿ ಎಂದು ಸಚಿವ ಮುರುಗೇಶ್ ನಿರಾಣಿ  ಮತ್ತು ಬಿವೈ ವಿಜಯೇಂದ್ರಗೆ  ಸವಾಲು ಹಾಕಿದ್ದಾರೆ.

Key words: conspired – defeat – BJP – corporation- elections-MLA -Yatnal – Nirani -Vijayendra.