ವಲಸಿಗ ಕಾರ್ಮಿಕರ ರೈಲು ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ: ಸೋನಿಯಾ ಗಾಂಧಿ

Promotion

ನವದೆಹಲಿ, ಮೇ 04, 2020 (www.justkannada.in): ವಲಸಿಗ ಕಾರ್ಮಿಕರ ರೈಲು ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಪಕ್ಷವೇ ಭರಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಇದು ನನಗೆ ತುಂಬಾ ಬೇಸರ ತರಿಸಿದೆ ಎಂದ ಸೋನಿಯಾ, ನಮ್ಮ ಆರ್ಥಿಕತೆಯ ಬೆನ್ನೆಲುಬು,ನಮ್ಮ ದೇಶದ ಅಭಿವೃದ್ಧಿಯ ರಾಯಭಾರಿಯಾಗಿರುವ ಕಾರ್ಮಿಕರ ರೈಲು ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಹೇಳಿದರು.

ಪಿಎಂ ಕೊರೋನ ಪರಿಹಾರ ಫಂಡ್‌ಗೆ 150 ಕೋ.ರೂ.ದೇಣಿಗೆ ನೀಡುವ ರೈಲ್ವೆ ಇಲಾಖೆಗೆ ನಮ್ಮ ದೇಶದ ಅತ್ಯಗತ್ಯ ಸದಸ್ಯರಿಗೆ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದೇ ರೀತಿಯ ಸೌಜನ್ಯವನ್ನು ಯಾಕೆ ತೋರಿಸಲು ಸಾಧ್ಯವಾಗಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಮಿಕರಿಂದ ರೈಲು ಟಿಕೆಟ್ ದರವನ್ನು ಕೇಂದ್ರ ಸರಕಾರ ಹಾಗೂ ರೈಲ್ವೆ ಇಲಾಖೆ ವಸೂಲು ಮಾಡುತ್ತಿರುವುದೇಕೆ ಎಂದು ಸೋನಿಯಾ ಪ್ರಶ್ನಿಸಿದ್ದಾರೆ.