ಕಾಂಗ್ರೆಸ್ ನವರು ಲಿಂಗಾಯತ ಮುಖ್ಯಮಂತ್ರಿಗಳನ್ನ ಟಾರ್ಗೆಟ್ ಮಾಡಿದ್ಧಾರೆ- ಸಚಿವ ಸುಧಾಕರ್ ಆರೋಪ.

Promotion

ಬೆಂಗಳೂರು,ಸೆಪ್ಟಂಬರ್,24,2022(www.justkannada.in): ಕಾಂಗ್ರೆಸ್ ನವರು ಲಿಂಗಾಯತ ಮುಖ್ಯಮಂತ್ರಿಗಳನ್ನ ಟಾರ್ಗೆಟ್ ಮಾಡಿದ್ಧಾರೆ. ಪ್ರತಿ ಭಾರಿಯೂ ಲಿಂಗಾಯತ ಸಮುದಾಯದ ಸಿಎಂ ಟಾರ್ಗೆ ಟ್ ಮಾಡುತ್ತಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್, ಪ್ರಬಲ ಸಮುದಾಯಗಳನ್ನ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತೆ. ವಿರೇಂಧ್ರ ಪಾಟೀಲ್,  ಕೇಂಗಲ್ ಹನುಮಂತಯ್ಯರನ್ನೂ ಬಿಟ್ಟಿಲ್ಲ.  ಯಾವ್ಯಾವ ನಾಯಕರು ಉತ್ತಮ ಕೆಲಸ ಮಾಡುತ್ತಾರೋ ಅವರನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ನಿಂದ ಪೇ ಸಿಎಂ ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ವೈಯಕ್ತಿಕ ಲಾಭಕ್ಕಾಗಿ ಇದನ್ನ ಮಾಡುತ್ತಿದ್ದಾರೆ.  ಕಾಂಗ್ರೆಸ್ ನವರು ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ .  ಕಾಂಗ್ರೆಸ್ ನವರು ಏನು ಸತ್ಯ ಹರಿಶ್ಚಂದ್ರರಾ..?  ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಜನ ರು ಜೈಲಿಗೆ ಹೋಗಿದ್ದಾರೆ . ಎಷ್ಟು ಜನ ಇನ್ನೂ ಬೇಲ್ ಮೇಲೆ ಇದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಏನು ನೈತಿಕತೆ ಇದೆ. ಮಾಜಿ ಸಿಎಂ ರಸ್ತೆಗೆ ಬಂದು ಪೋಸ್ಟರ್ ಹಾಕುತ್ತಾರೆ ಎಂದರೇ ಏನರ್ಥ..? ಎಂದು ಸುಧಾಕರ್ ವಾಗ್ದಾಳಿ ನಡೆಸಿದರು.

Key words: Congress –target- Lingayat –CM-Minister- Sudhakar