ಸಂಸದ ಪ್ರತಾಪ್ ಸಿಂಹ ಕಚೇರಿಯತ್ತ ಕತ್ತೆ ಜೊತೆ ಮೆರವಣಿಗೆ ಹೊರಟ ‘ಕೈ’ ಮುಖಂಡರಿಗೆ ತಡೆ.

ಮೈಸೂರು,ಜುಲೈ,5,2022(www.justkannada.in): ಅಭಿವೃದ್ಧಿ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ನಡುವೆ  ಕ್ರೆಡಿಟ್ ವಾರ್, ವಾದ, ವಾಗ್ವದ ಮುಂದುವರೆದಿದ್ದು ಈ ಮಧ್ಯೆ ಇಂದು ಬಹಿರಂಗ ಚರ್ಚೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದಿನಾಂಕ ನಿಗದಿ ಮಾಡಿದ್ದರು.

ಅಂತೆಯೇ ಕಾಂಗ್ರೆಸ್ ಕಚೇರಿ ಆವರಣದಿಂದ ಸಂಸದ ಪ್ರತಾಪ್ ಸಿಂಹ ಕಚೇರಿವರೆಗೆ  ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಕತ್ತೆ ಜೊತೆ ಮೆರವಣಿಗೆ  ಹೊರಡುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನ ದಾಸಪ್ಪ ವೃತ್ತದಲ್ಲಿ ಪೊಲೀಸರು ತಡೆದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ರನ್ನು ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಕಾಂಗ್ರೆಸ್ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ವಶಕ್ಕೆ ಪಡೆದಿದ್ದ ಎಂ ಲಕ್ಷ್ಮಣ್ ರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಪೊಲೀಸರ ವಶದಿಂದ ಬಿಡುಗಡೆಗೊಳ್ಳುತ್ತಿದ್ದಂತೆ ಎಂ.ಲಕ್ಷ್ಮಣ್ ಅವರು ಸಂಸದ ಪ್ರತಾಪ್ ಸಿಂಹಗೆ ವೀಡಿಯೋ ಕಾಲ್ ಮಾಡಿದ್ದು, ಆದರೆ ವಿಡಿಯೋ ಕಾಲ್ ಅನ್ನ ಪ್ರತಾಪ್ ಸಿಂಹ ಸ್ವೀಕರಿಸಿಲ್ಲ ಎನ್ನಲಾಗಿದೆ.

Key words: congress-spokesperson-M.Lakshman-MP-Prathap simha