ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಅದಕ್ಕೆ ಡಿಕೆಶಿ ಕ್ಯಾಪ್ಟನ್- ಸಚಿವ ಶ್ರೀರಾಮುಲು ವ್ಯಂಗ್ಯ…

Promotion

ರಾಯಚೂರು ,ಮಾರ್ಚ್,29,2021(www.justkannada.in):  ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದಕ್ಕೆ ಡಿಕೆ ಶಿವಕುಮಾರ್ ಕ್ಯಾಪ್ಟನ್ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಲೇವಡಿ ಮಾಡಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಇಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್  ನಾಮಪತ್ರ ಸಲ್ಲಿಕೆ ಮಾಡಿದರು. ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆಯಾದ  ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಮಸ್ಕಿ ಕ್ಷೇತ್ರದಲ್ಲಿ  ಈಗಾಗಲೇ ಪ್ರತಾಪ್ ಗೌಡ ಪಾಟೀಲ್ ರನ್ನ ಜನ ಗೆಲ್ಲಿಸಿದ್ದಾರೆ. ಮೋದಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ.   ಕಾಂಗ್ರೆಸ್ ಗೆ ಬುದ್ದಿ ಕಲಿಸುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ.  ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದಕ್ಕೆ ಡಿಕೆಶಿ ಕ್ಯಾಪ್ಟನ್  ಎಂದು ವ್ಯಂಗ್ಯವಾಡಿದರು. Congress –sinking- ship- DK shivakumar- Captain –Minister- Sriramulu

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ. ಉಪಚುನಾವಣೆಗೆ ಸಿಡಿ ಪ್ರಕರಣ ಪರಿಣಾಮ ಬೀರಲ್ಲ ಎಂದು ಸಚಿವ  ಶ್ರೀರಾಮುಲು ತಿಳಿಸಿದರು.

Key words: Congress –sinking- ship- DK shivakumar- Captain –Minister- Sriramulu