ಮೂರು ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು: ಕಾಂಗ್ರೆಸ್ ನವರು ಸುಮ್ಮನೆ ಆರೋಪ ಮಾಡಬಾರದು-ಸಚಿವ ವಿ.ಸೋಮಣ್ಣ…

ಮೈಸೂರು,ಏಪ್ರಿಲ್,17,2021(www.justkannada.in): ಉಪಚುನಾವಣೆಯಲ್ಲಿ ಬಿಜೆಪಿಯಿಂದ ಹಣ ಹಂಚಿಕೆ  ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಗೆ ವಸತಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ವಿ.ಸೋಮಣ್ಣ, ಕಾಂಗ್ರೆಸ್ ನವರು ಸುಮ್ಮನೆ ಆರೋಪ ಮಾಡಬಾರದು. ಸರ್ಕಾರ ಇದ್ದ ಸಂಧರ್ಭದಲ್ಲಿ ನಾವೂ ಆರೋಪ ಮಾಡಿದ್ದೆವು. ಈಗ ಅವರು ಆರೋಪ‌ ಮಾಡುತ್ತಿದ್ದಾರೆ. ನಿನ್ನೆ ಕಾಂಗ್ರೆಸ್ ನವರ ನನ್ನ ಜೊತೆಯಲ್ಲೆ ಇದ್ದರು. ಆಗ ನೇರವಾಗಿ ನನ್ನ ಬಳಿ ಹೇಳಲಿಲ್ಲ. ಈಗ ಮಾಧ್ಯಮಗಳಲ್ಲಿ ಆ ರೀತಿ ಹೇಳಿಕೆ ನೀಡಬಾರದು. ಬಸವಕಲ್ಯಾಣ,ಮಸ್ಕಿ, ಬೆಳಗಾವಿ ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊರೊನಾ‌ ನಿಯಂತ್ರಣಕ್ಕೆ ಕೆಲವು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ.

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಕೊರೊನಾ‌ ನಿಯಂತ್ರಣಕ್ಕೆ ಕೆಲವು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಬೆಂಗಳೂರಿನಲ್ಲಿ ಶವಸಂಸ್ಕಾರದ ವಿಚಾರವಾಗಿ ಒಂದೆರಡು‌ ನ್ಯೂನತೆಗಳಿತ್ತು. ಅದನ್ನು ನಿನ್ನೆ ಸಭೆ ನಡೆಸಿ ಸರಿಪಡಿಸಲಾಗಿದೆ. ನನ್ನ ಕ್ಷೇತ್ರ ಸೇರಿದಂತೆ ಎಲ್ಲೂ ಕೂಡ ಆಸ್ಪತ್ರೆಗಳ ಸಮಸ್ಯೆ ಇಲ್ಲ. ಮುಖ್ಯಮಂತ್ರಿಗಳಿಗೆ ಅನಾರೋಗ್ಯ ಕಾರಣ ಸರ್ವಪಕ್ಷ ಸಭೆ ಮುಂದೂಡಲಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯದಿದ್ದರೆ ಅದಕ್ಕೆ ಗಾಂಭೀರ್ಯ ಇರುವುದಿಲ್ಲ. ಮೂರ್ನಾಲ್ಕು ದಿನದಲ್ಲಿ ಆರೋಗ್ಯದಿಂದ ಹೊರಬರುತ್ತಾರೆ. ಆ ನಂತರ ಸಭೆ ನಡೆಸಲಾಗುತ್ತೆ ಎಂದು ಸಚಿವ ವಿ.ಸೋಮಣ್ಣ  ತಿಳಿಸಿದರು.

ನನ್ನ ವರದಿ ನೆಗೆಟಿವ್ ಬಂದಿದೆ…

ಉಪಚುನಾವಣೆಗೆ ಪ್ರಚಾರ ಮುಗಿದ ಬಳಿಕ ನಾನು ಕೋವಿಡ್ ಟೆಸ್ಟ್ ಮಾಡಿಸಿದ್ದೇನೆ. ನನ್ನ ವರದಿ ನೆಗೆಟಿವ್ ಬಂದಿದೆ. ನನ್ನಿಂದ ಬೇರೆಯವರಿಗೆ ತೊಂದರೆಯಾಗಬಾರದು ಅಂತ ತಕ್ಷಣ ಟೆಸ್ಟ್ ಮಾಡಿಸಿದೆ. ನನ್ನ ಜೊತೆ ಬಂದವರು ಟೆಸ್ಟ್ ಮಾಡಿಸಿದ್ದಾರೆ‌. ಅವರುಗಳ ವರದಿ ಕೂಡ ನೆಗೆಟಿವ್ ಇದೆ‌. ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದವರು ಎಲ್ಲರು ಕೋವಿಡ್ ಟೆಸ್ಟ್ ಮಾಡಿಸಿ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.Congress- should not – accused-Minister -V. Somanna-mysore

ಕೊರೊನಾ ಬಗ್ಗೆ ಯಾರು ಗಾಬರಿಯಾಗಬೇಡಿ. ನಿಮ್ಮ ಆತಂಕ ಮತ್ತು ಗಾಬರಿ ಸಮಸ್ಯೆ ಹೆಚ್ಚು ಮಾಡುತ್ತದೆ. ಎಲ್ಲರು ಜಾಗರೂಕತೆಯಿಂದ ಇರಿ ಎಂದು ಸಚಿವ ವಿ.ಸೋಮಣ್ಣ ಸಲಹೆ ನೀಡಿದರು.

ENGLISH SUMMARY…..

We will win in all the three constituencies in the bypoll: Minister V. somanna
Mysuru, Apr. 17, 2021 (www.justkannada.in): The Congress party had alleged that the BJP is engaged in the distribution of money in the bypolls. In his reaction to the Congress party’s allegations Housing Minister V. Somanna said that Congress should not make allegations without proper evidence. “We also had made allegations when they were in power, now they are also doing the same. Congress party leaders with me yesterday, but they did not say anything to me directly. Now they have given statements before the media,” he said and also added that BJP will win in all the three assembly constituencies Basavakalyana, Maski, and Belagavi.
In his reply to the Corona situation in the state, the Minister explained that it has become inevitable to initiate tough rules. “There were certain drawbacks concerning cremation of the bodies. We have discussed it yesterday and we have set it right. There is no shortage of beds in hospitals anywhere in the State. The all-party meeting has been postponed as the Chief Minister is in hospital. It will be conducted once he returns,” he said.Congress- should not – accused-Minister -V. Somanna-mysore
On the occasion, Minister V. Somanna also clarified that he has tested negative for COVID-19.
Keywords: Housing Minister/ V. Somanna/ all-party meeting postponed/ BJP will win in all three constituencies/ bypolls

Key words:  Congress- should not – accused-Minister -V. Somanna-mysore