ಪ್ರತಿಭಟನೆಯಿಂದ ಕೋವಿಡ್ ಹೆಚ್ಚಾದರೇ ಕಾಂಗ್ರೆಸ್ ಹೊಣೆ- ಸಚಿವ ಡಾ.ಕೆ.ಸುಧಾಕರ್.

Promotion

ಬೆಂಗಳೂರು,ಜೂನ್,16,2022(www.justkannada.in):  ಜಾರಿ ನಿರ್ದೇಶನಾಲಯದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆಯನ್ನ ವಿರೋಧಿಸಿ ಕಾಂಗ್ರೆಸ್ ಇಂದು ರಾಜಭವನ ಚಲೋ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯಿಂದ ಕೋವಿಡ್ ಹೆಚ್ಚಾದರೇ ಕಾಂಗ್ರೆಸ್ ಹೊಣೆ ಹೊರಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಕಾಂಗ್ರೆಸ್ ರಾಜಭವನ ಚಲೋ ಕುರಿತು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಕೊರೋನಾ ಹೆಚ್ಚಾದರೇ ಕಾಂಗ್ರೆಸ್ ಹೊಣೆ. ಕಾಂಗ್ರೆಸ್ ನವರೇ ನೈತಿಕ ಹೊಣೆ ಹೊರಬೇಕು. ಪ್ರತಿಭಟನೆ ಮಾಡುವುದಾದರೇ ಫ್ರೀಡಂ ಪಾರ್ಕ್ ನಲ್ಲಿ ಮಾಡಲಿ.  ಜನ ಸೇರಿಸಿಕೊಂಡು ಪ್ರತಿಭಟಿಸುವುದು ಸರಿಯಲ್ಲ ಎಂದರು.

ರಾಜಭವನ ಚಲೋ ಮಾಡುತ್ತಿದ್ದಾರೆ ಕಾಂಗ್ರೆಸ್ ಹೋರಾಟದಕ್ಕೆ  ಕೇಸ್  ದಾಖಲಿಸುವ ಬಗ್ಗೆ ಚರ್ಚಿಸುತ್ತೇನೆ. ಕೋವಿಡ್ ನಿಯಮ ಉಲ್ಲಂಘನೆಯಡಿ ಕೇಸ್ ಹಾಕುವ ಬಗ್ಗೆ ಸಿಎಂ ಜತೆ ಚರ್ಚಿಸುವೆ ಎಂದು ಸುಧಾಕರ್ ತಿಳಿಸಿದರು.

Key words: Congress – responsible – covid-increase- protest-Minister-Dr. K. Sudhakar.