ಕೊರೋನಾ ಹರಡುವಿಕೆ ಮತ್ತು ಸಾವಿಗೆ ಕಾಂಗ್ರೆಸ್ ಕಾರಣ- ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪ…

Promotion

ಕಲ್ಬರ್ಗಿ,ಮೇ,21,2021(www.justkannada.in): ಕೊರೋನಾ ಹರಡುವಿಕೆ ಮತ್ತು ಸಾವಿಗೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ.jk

ಮಾಧ್ಯಮಗಳ ಜತೆ ಇಂದು ಮಾತನಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಳೀನ್ ಕುಮಾರ್ ಕಟೀಲ್, ವ್ಯಾಕ್ಸಿನ್ ಬಗ್ಗೆ ಜನರ ದಿಕ್ಕು ತಪ್ಪಿಸಿತ್ತು. ಇದು ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಟೀಕಿಸಿದರು. ಇದರಿಂದ ಜನರು ಭಯಗೊಂಡು ದೂರು ಉಳಿದರು. ಇದು ಕಾಂಗ್ರೆಸ್ ಚಿಲ್ಲರೆ ರಾಜಕಾರಣ. ಕೊರೋನಾಗೆ ಜನ ಬಲಿಯಾಗಿದ್ರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಕಿಡಿಕಾರಿದರು. Congress - responsible - corona -spread – death-  BJP president -Nalin Kumar Katil

ಡಿಸಿಗಳ ಜತೆ ಸಿದ್ಧರಾಮಯ್ಯ ಸಭೆಗೆ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ವಿಪಕ್ಷ ನಾಯಕರು ಸಂವಿಧಾನ ಬದ್ಧವಾಗಿ ಕಾರ್ಯ ನಿರ್ವಹಿಸಲಿ. ಎಲ್ಲೆ ಮೀರಿ ವರ್ತಿಸಿದರೆ ಸರ್ಕಾರಕ್ಕೂ ನಿಯಮಗಳಿವೆ.ಎಂದು ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

Key words: Congress – responsible – corona -spread – death-  BJP president -Nalin Kumar Katil