ಬಿ.ಬಿ.ಎಂ.ಪಿ ಚುನಾವಣೆ ಘೋಷಣೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಿಂದ ಮನವಿ.

ಬೆಂಗಳೂರು,ಮೇ,13,2022(www.justkannada.in): ಸುಪ್ರೀಂಕೋರ್ಟ್ ದೇಶದ ಎಲ್ಲ ಸ್ಥಳೀಯ ಸಂಸ್ಥೆಗಳು ಚುನಾವಣೆ ನಡೆಸಬೇಕು ತೀರ್ಪು ನೀಡಿದ ಹಿನ್ನಲೆ ಬಿ.ಬಿ.ಎಂ.ಪಿ.ಚುನಾವಣೆ ಘೋಷಣೆ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.

ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ನೇತತ್ವದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ ಸಲ್ಲಿಸಿತು, ಶಾಸಕರಾದ ರಿಜ್ವಾನ್ ಆರ್ಹದ್, ವಿಧಾನಪರಿಷತ್ ಸದಸ್ಯರುಗಳಾದ ಯು.ಬಿ.ವೆಂಕಟೇಶ್, ಪಿ.ಆರ್.ರಮೇಶ್,ಮಾಜಿ ಲೋಕಸಭಾ ಸದಸ್ಯರಾದ ವಿ.ಎಸ್.ಉಗ್ರಪ್ಪ,ಮತ್ತು ಮಾಜಿ  ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ಮಾಜಿ ಆಡಳಿತ ಪಕ್ಷದ ನಾಯಕರುಗಳಾದ ಎಮ್.ಶಿವರಾಜು,ಅಬ್ದುಲ್ ವಾಜಿದ್,ರಿಜ್ವಾನ್ ನವಾಬ್,ಸತ್ಯನಾರಾಯಣ್ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್, ಬೆಂಗಳೂರುನಗರ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರುಗಳಾದ ರಾಜ್ ಕುಮಾರ್, ಶೇಖರ್, ಜಿ.ಕೃಷ್ಣಪ್ಪ ರವರು  ಮನವಿ ಸಲ್ಲಿಸಿದರು.

ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ  ಮಾತನಾಡಿ, ಬೆಂಗಳೂರು ನಗರ ವಾರ್ಡ್ ವಿಂಗಡನೆ ಮಾಡಲು ಕಾಂಗ್ರೆಸ್ ಪಕ್ಷ ಸಹಕಾರ ನೀಡಲಾಯಿತು. ಅದರೆ ಬಿಜೆಪಿ ಪಕ್ಷ ತಮ್ಮಿಷ್ಟದ ತಕ್ಕಂತೆ ವಾರ್ಡ್ ವಿಂಗಡಣೆ ಮಾಡಲು ಹೋರಟಿತು.

ಬಿ.ಬಿ.ಎಂ.ಪಿ.ಚುನಾವಣೆ ಮೀಸಲಾತಿಯನ್ನ ಕಾಂತ್ ರಾಜ್ ಆಯೋಗ ತೀರ್ಮಾನದಂತೆ ಕೈಗೊಳ್ಳಲಿ. ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ರಾಜ್ಯ ಸರ್ಕಾರ ಚುನಾವಣೆ ನಡೆಸಲಿ .ಭಕ್ತವತ್ಸಲ ಸಮಿತಿ ವರದಿ ಕಾಯುವುದು ಬೇಡ ಇದರಿಂದ ಚುನಾವಣೆ ವಿಳಂಬವಾಗುತ್ತದೆ ಎಂದು ಹೇಳಿದರು.

ಎಮ್.ಶಿವರಾಜು ಮಾತನಾಡಿ ರಾಜ್ಯ ಸರ್ಕಾರ 20ತಿಂಗಳು ಕಳೆದರೆ ಡಿಲಿಮಿಟಿಶನ್ ಮೀನಮೇಷ ಎಣಿಸುತ್ತಿದೆ. ಸುಪ್ರೀಂಕೋರ್ಟ್ ಆದೇಶದಂತೆ ಚುನಾವಣೆ ಆಯೋಗ ಚುನಾವಣೆ ದಿನಾಂಕ ಘೋಷಣೆ ಮಾಡಲಿ ಮತ್ತು ರಾಜ್ಯ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗದ ಮೀಸಲಾತಿ ನಿರ್ಣಯ ಮಾಡಿ ಚುನಾವಣೆ ನಡೆಸಲಿ ಎಂದು ಹೇಳಿದರು.

ಅಬ್ದುಲ್ ವಾಜಿದ್ ಮಾತನಾಡಿ ಸುಪ್ರೀಂಕೋರ್ಟ್ ಸ್ಥಳೀಯ ಚುನಾವಣೆ ಬಗ್ಗೆ ಸ್ಪಷ್ಟವಾಗಿ ಆದೇಶ ನೀಡಿದ್ದಾರೆ .ಕಳೆದ ಎರಡು ವರ್ಷದಿಂದ  ಅಭಿವೃದ್ದಿ ಕುಂಠಿತವಾಗಿದೆ.ಪ್ರಜಾಪ್ರಭುತ್ವ ರಕ್ಷಣೆಗೆ ತತಕ್ಷಣ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿ ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು.

Key words: Congress-requests-state-election-commission – announce -BBMP -election