ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ಪ್ರಯತ್ನಿಸದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ…

Promotion

ಬೆಂಗಳೂರು,ಸೆ,28,2019(www.justkannada.in): ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ಪ್ರಯತ್ನಿಸದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಪಕ್ಷದ ಕಚೇರಿ ಮುಂಭಾಗದಲ್ಲಿಂದು ಸಾಂಕೇತಿಕ ಧರಣಿ ನಡೆಸಲಾಯಿತು.

ಮಹಿಳಾ ಘಟಕದ ಅಧ್ಯಕ್ಷೆ, ಪುಷ್ಪಾ ಅಮರನಾಥ್ ಮಾತನಾಡಿ, ಈರುಳಿ ಬೆಲೆ ಏರಿಕೆಯಿಂದ ಜನ ಸಾಮಾನ್ಯರು, ಮಧ್ಯಮವರ್ಗದ ವರು ಪರಿತಪ್ಪಿಸುವಂತಾಗಿದೆ.ಕೆಜಿ ಈರುಳಿಗೆ 97ರೂಪಾಯಿ ಏರಿಕೆಯಾಗಿದೆ, ಕೇವಲ ಸೇಬು ಹಣ್ಣಿನ ಬೆಲೆ ಇಳಿಕೆಯಾದರೆ ಇದರಿಂದ ಮನೆಯಲ್ಲಿ ಗೃಹಿಣಿಯರು ಅಡುಗೆ ಮಾಡಲು ಸಾಧ್ಯವಾಗುತ್ತಾ ಎಂದು ಪ್ರಶ್ನಿಸಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇವಲ ವಿದೇಶ ಹಾಗೂ ಅಮೆರಿಕ ಪ್ರವಾಸದಲ್ಲಿದ್ದು ವೈಬೋಗದ ಮಾತುಗಳನ್ನು ಆಡಿದರೆ ಸಾಲದು ದೇಶದ ಜನ ಸಾಮಾನ್ಯರ ಬಗ್ಗೆ ಗಮನಹರಿಸ ಬೇಕಾಗಿದೆ. ಈರುಳಿ ಬೆಲೆ ಏರಿಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು

ಪ್ರತಿಭಟನೆಯಲ್ಲಿ ಮಹಿಳಾ ಪದಾಧಿಕಾರಿಗಳಾದ ಸಲ್ಮಾ, ಶೋಭಾ, ಮತ್ತಿತರರು ಹಾಜರಿದ್ದರು

Key words: Congress -protests – central government’s- decision