ಅಗ್ನಿಪಥ್ ಯೋಜನೆ ವಿರೋಧಿಸಿ ನಾಳೆ 224 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪ್ರತಿಭಟನೆ- ಡಿಕೆ ಶಿವಕುಮಾರ್.

Promotion

ಬೆಂಗಳೂರು,ಜೂನ್,25,2022(www.justkannada.in):  ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಖಂಡಿಸಿ ನಾಳೆ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಅಗ್ನಿಪಥ್ ಯೋಜನೆ ಖಂಡಿಸಿ ನಾಳೆ 224 ಕ್ಷೇತ್ರಗಳಲ್ಲೂ ಪ್ರತಿಭಟನೆ ನಡೆಸುತ್ತೇವೆ.  ನಮ್ಮ ಮಕ್ಕಳನ್ನ ಅಗ್ನಿಪಥ್ ಕೆಲಸಕ್ಕೆ ಕಳಿಸಲ್ಲ. ಬಿಜೆಪಿಯವರು ಬೇಕಿದ್ದರೇ  ಅವರ ಮಕ್ಕಳನ್ನ ಕಳಿಸಲಿ.  ಬಿಜೆಪಿ ಸಚಿವರು ಶಾಸಕರು ತಮ್ಮ ಮಕ್ಕಳನ್ನ ಕಳಿಸಲಿ.

ಬಿಜೆಪಿಯವರ ಮಕ್ಕಳು ಡಾಕ್ಟರ್ ಇಂಜಿನಿಯರ್ ಆಗಬೇಕು.  ನಮ್ಮ ಮಕ್ಕಳು ಗಾರ್ಡ್ ಕೆಲಸಕ್ಕೆ ಹೋಗಬೇಕಾ..?  ಸೇನೆಗೆ ಮೊದಲ ನಿಯಮದಂತೆ ನೇಮಕಾತಿ ನಡೆಸಲಿ ಎಂದು ಡಿ.ಕೆ ಶಿವಕುಮಾರ್ ಆಗ್ರಹಿಸಿದರು.

Key words: Congress-protests – 224 constituencies- tomorrow-DK Shivakumar.