ಮೇವು ತಿಂದವರ ಜೊತೆ ಪೇಪರ್ ತಿಂದವರೂ ಜೈಲಿಗೆ –ಕೈ ನಾಯಕರ ವಿರುದ್ಧ ಸಿ.ಟಿ ರವಿ ವಾಗ್ದಾಳಿ.

Promotion

ಬೆಂಗಳೂರು,ಜೂನ್,13,2022(www.justkannada.in):  ಇಡಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ  ಈ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಮೇವು ತಿಂದವರ ಜೊತೆ ಪೇಪರ್ ತಿಂದವರೂ ಜೈಲಿಗೆ ಹೋಗುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಮೇವು ತಿಂದವರು ಈಗ ಜೈಲಿನಲ್ಲಿದ್ದಾರೆ.  ಪೇಪರ್ ತಿಂದವರು ಜೈಲಿಗೆ ಹೋಗ್ತಾರೆ. ನೀವು ಸಂವಿಧಾನಕ್ಕಿಂತ ಮೇಲಿನವರಾ ಹಾಗಲಕಾಯಿಗೆ  ಕಾಲಿಗೆ ಬೇವಿನ ಕಾಯಿ ಸಾಕ್ಷಿಯಂತೆ ಭ್ರಷ್ಟರಿಗೆ ಭ್ರಷ್ಟರಿಂದಲೇ ಬೆಂಬಲ. ಭ್ರಷ್ಟಾಚಾರದ ಸರದಾರ ಕಾಂಗ್ರೆಸ್. ಆಡು ಮುಟ್ಟದ ಸೊಪ್ಪಿಲ್ಲ  ಕಾಂಗ್ರೆಸ್ ನಾಯಕರು ಮಾಡದ ಭ್ರಷ್ಟಾಚಾರವಿಲ್ಲ. ಇವರು ಏನು ಮಾಡಿದರೂ ಕೇಳಬಾರದಾ..? ಕಾಂಗ್ರೆಸ್ಸಿಗರು ದೇಶಕ್ಕಿಂತ ದೊಡ್ಡವರಾ..? ಎಂದು ಗುಡುಗಿದರು.  

ಕಾಲಿನಿಂದ ತಲೆವರೆಗೂ  ಕಾಂಗ್ರೆಸ್ ಭ್ರಷ್ಟಾಚಾರ ಹೊದ್ದಿಕೊಂಡಿದೆ.  ಗಾಂಧಿ ಕುಟುಂಬ ಕಾಪಾಡಿಕೊಳ್ಳಲು ಕಾರ್ಯಕರ್ತರನ್ನ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿ.ಟಿ  ರವಿ ಹರಿಹಾಯ್ದರು.

Key words: congress-protest-former-minister-CT Ravi