ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ.

Promotion

ಮಂಡ್ಯ,ಫೆಬ್ರವರಿ,18,2022(www.justkannada.in): ಕೆ.ಎಸ್ ಈಶ್ವರಪ್ಪ ಅವರನ್ನ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಧರಣಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕಲಾಪ ನಡೆಸಲು ದಿನಕ್ಕೆ 2 ಕೋಟಿ ಖರ್ಚಾಗುತ್ತದೆ. ಅವರವರ ವೈಯಕ್ತಿಕ ಪ್ರತಿಷ್ಠೆಗೆ ಕಲಾಪ ಹಾಳಾಗುತ್ತಿದೆ.  ಅನಗತ್ಯವಾಗಿ ಕಾಂಗ್ರೆಸ್ ನವರು ಕಲಾಪ ಹಾಳು ಮಾಡುತ್ತಿದ್ದಾರೆ. ಒಬ್ಬ ಮಂತ್ರಿ ಸ್ಥಾನದ ವಿಚಾರ ಇಟ್ಟುಕೊಂಡು ಗದ್ದಲ ಮಾಡುತ್ತಿದ್ದಾರೆ. ಕಲಾಪದಲ್ಲಿ ಯಾವ ವಿಷಯಗಳಿಗೆ ಪ್ರಾತಿನಿಧ್ಯ ಕೊಡಬೇಕೋ ಕೊಡುತ್ತಿಲ್ಲ. ನಾವು ಜನರ ಬದುಕು ಕಟ್ಟಿಕೊಡಬೇಕು ಹೊರತು ಪ್ರತಿಷ್ಠೆಗಾಗಿ ಕಲಾಪವನ್ನೇ ಹಾಳು ಮಾಡುತ್ತಿರುವುದು ಎಷ್ಟು ಸರಿ ? ಎಂದು ಕಿಡಿಕಾರಿದ್ದಾರೆ.

ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ನಾನು ಯಾವುದೇ ಹಿಜಾಬ್ ಜತೆಯೂ ಇಲ್ಲ. ನಮಗೆ ನಾಡಿನ ಜನತೆ ಬದುಕು ಮುಖ್ಯ. ಶಾಂತಿ ವಾತಾವರಣ ಹಾಳುಮಾಡುವುದು ಸರಿಯಲ್ಲ ಯಾವುದೇ ಜಾತಿ, ಧರ್ಮದ ಜನರಿರಲಿ ಅವರು ನೆಮ್ಮದಿಯಿಂದ ಬದುಕುವುದು ಮುಖ್ಯ ಎಂದರು.

Key words: congress-protest-former CM-HD kumaraswamy