ಕಾಂಗ್ರೆಸ್ ಪಾದಯಾತ್ರೆ : ಇಂಥ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ- ಸಚಿವ ಸುಧಾಕರ್ ಅಸಮಾಧಾನ.

Promotion

ಬೆಂಗಳೂರು,ಜನವರಿ,8,2022(www.justkannada.in):  ರಾಜ್ಯದಲ್ಲಿ ಕೊವೀಡ್ ಹೆಚ್ಚುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಿಂದ ರಾಜಕಾರಣ ಸರಿಯಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಾದಯಾಯತ್ರೆಗೆ ಬಗ್ಗೆ ಕಿಡಿಕಾರಿದ ಸಚಿವ ಸುಧಾಕರ್, ಕಾಂಗ್ರೆ್ ಪಾದಯಾತ್ರೆ ದುರದೃಷ್ಟಕರ. ಪಾದಯಾತ್ರೆಗೆ ನಮ್ಮ ವಿರೋಧ ಇಲ್ಲ ಪಾದಯಾತ್ರೆಯೋ ಮ್ಯಾರಥಾನೋ ಮಾಡಿ. ಆದರೆ ಸರ್ಕಾರದ ನಿಯಮ ಪಾಲಿಸದಿರುವುದು ಸರಿಯಲ್ಲ ಎಂದರು.

ಕೋರೋನಾ ವೇಗಕ್ಕೆ ಕಡಿವಾಣ ಹಾಕೋಕೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ.  ರಾಜ್ಯದಲ್ಲಿ ಶೇ.7.8 ರಷ್ಟು ಪಾಸಿಟಿವಿಟಿ ದರ ಇದೆ. ವೀಕೆಂಡ್ ಕರ್ಫ್ಯೂನಿಂದ ಸ್ವಲ್ಪ ಕೊರೋನಾ ನಿಯಂತ್ರಿಸಬಹುದು. ಜನರಿಗೆ ಮನವರಿಕೆ ಮಾಡಲು ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಸುಧಾಕರ್ ತಿಳಿಸಿದರು.

Key words: Congress-Politics -Minister -Sudhakar