ದಂಗೆ ಎಬ್ಬಿಸಿ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆ: ‘ಕೈ’ ಹುನ್ನಾರದ ಬಗ್ಗೆ ಜಾಗೃತಿ ಮೂಡಿಸುತ್ತೇವೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

Promotion

ಬೆಂಗಳೂರು,ಆಗಸ್ಟ್,23,2022(www.justkannada.in):  ಕಾಂಗ್ರೆಸ್  ದಂಗೆ ಎಬ್ಬಿಸಿ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ. ಕಾಂಗ್ರೆಸ್ ಹುನ್ನಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಕಾಂಗ್ರೆಸ್ ಮಡಿಕೇರಿ  ಚಲೋ ಕುರಿತು ಟೀಕಿಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ನದ್ದು ಒಂದು ಮೊಟ್ಟೆಯ ಕಥೆ. 2009-10ರಲ್ಲಿ ಮಲ್ಲಯುದ್ಧ ನೆನಪಾಯ್ತು. ಅಂದು ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಅಂದು ಪಾದಯಾತ್ರೆ ನಡೆಸಿ ಅಧಿಕಾರ ಹಿಡಿಯುವ ಭ್ರಮೆ.  ಬಿಜೆಪಿ ವಿರುದ್ಧ ದಂಗೆ ಎಬ್ಬಿಸುವ ಭ್ರಮೆ. ದಂಗೆ ಎಬ್ಬಿಸಿ ಮತ್ತೆ ಅಧಿಕಾರ ಹಿಡಿಯಲು ಹೊರಟಿದೆ. ಈ ಹಿಂದೆ ಬಳ್ಳಾರಿ ಪಾದಯಾತ್ರೆ ಮಾಡಿದ್ದರು. ಈಗ ಮಡಿಕೇರಿ ಚಲೋ ಮಾಡಿ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಇದಕ್ಕೆ  ಪ್ರತಿಯಾಗಿ ಬಿಜೆಪಿ ಜಾಗೃತಿ ಸಮಾವೇಶಕ್ಕೆ ಮುಂದಾಗಿದೆ. ಸದ್ಯ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿಇದೆ. ಈ ಹುನ್ನಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಶಾಂತಿ ಸಭೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

ಮಡಿಕೇರಿ ಚಲೋಯಿಂದ ಏನು ಸಾಧನೆ ಮಾಡುತ್ತಾರೆ. ಇದು ಜನರಿಗೆ ಆಗಿರುವ ತೊಂದರೆನಾ..? ಟಮೊಟೊ ,ಚಪ್ಪಲಿ ತೂರಿದ ಉದಹಾರಣೆ ಇಲ್ಲವೇ. ಪಾದಯಾತ್ರೆಯಿಂದ ಯುದ್ಧಸಾರಿದ ಉದಹಾರಣೆ ನೋಡಿಲ್ಲ. ಇದೇನು ಇಂಡಿಯಾ –ಪಾಕಿಸ್ತಾನ ಯುದ್ಧವೇ..?  ಸರ್ಕಾರದ ವೈಪಲ್ಯದ ವಿರುದ್ಧ ಪಾದಯಾತ್ರೆ ಮಾಡಿ. ಮೈಸೂರಿನಿಂದ ಪಾದಯಾತ್ರೆ ಮಾಡಿ ನಾವೂ ಬರ್ತೇವೆ ಎಂದು ಹೆಚ್.ಡಿಕೆ ಹೇಳಿದರು.

Key words:  congress-padayatra-former CM-HD kumaraswamy