ಕಾಂಗ್ರೆಸ್ ನಾಯಕರದ್ಧು ಊಸರವಳ್ಳಿ ಪ್ರವೃತ್ತಿ- ಸಚಿವ ಬಿ.ಸಿ ಪಾಟೀಲ್ ಕಿಡಿ…

Promotion

ಬೆಂಗಳೂರು,ಅಕ್ಟೋಬರ್,31,2020(www.justkannada.in): ನವೆಂಬರ್ 3ರಂದು  ಆರ್.ಆರ್ ನಗರ ಉಪಚುನಾವಣಾ ಹಿನ್ನೆಲೆ, ಆಡಳಿತ ಮತ್ತು ವಿಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದು ಈ ನಡುವೆ ಕಾಂಗ್ರೆಸ್ ವಿರುದ್ಧ ಕೃಷಿ ಸಚಿವ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.jk-logo-justkannada-logo

ನಮ್ಮ ಅಭ್ಯರ್ಥಿ ಮುನಿರತ್ನ ಪರ ಕಾಂಗ್ರೆಸ್ ನಾಯಕರು ಸುಮ್ಮನೇ ಆರೋಪ, ಟೀಕೆ ಮಾಡುತ್ತಿದ್ದಾರೆ. ಮುನಿರತ್ನ ವಿರುದ್ಧ ಟೀಕೆ ಮಾಡೋದು ಸರಿಯಲ್ಲ. ಕಾಂಗ್ರೆಸ್ ನವರದ್ಧು ಊಸರವಳ್ಳಿ ಪ್ರವೃತ್ತಿ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದರು.congress-leaders-rr-nagar-byelection-bjp-candidate-muniratna-minister-bc-patil

ಮಾಧ್ಯಮದ ಜತೆ ಇಂದು ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಜಾತಿ ಹೆಸರಿನಲ್ಲಿ ಕಾಂಗ್ರೆಸ್ ಮತಯಾಚನೆಗೆ ಮುಂದಾಗಿದೆ. ಆದರೆ ಜಾತಿ ಹೆಸರಿನಲ್ಲಿ ಮತಯಾಚನೆ ಪ್ರಯೋಜನಕ್ಕೆ ಬರಲ್ಲ. ಆರ್.ಆರ್ ನಗರದಲ್ಲಿ ಮುನಿರತ್ನ ಪರ ಅಲೆ ಇದೆ ಎಂದು ಹೇಳಿದರು.

Key words: Congress leaders-RR Nagar-byelection- bjp candidate- muniratna- Minister -BC Patil