ಇದು ಸಾವೋ ಅಥವಾ ಕೊಲೆಯೋ..? ಚಾಮರಾಜನಗರ ಘಟನೆ ಕುರಿತು ರಾಹುಲ್ ಗಾಂಧಿ ಕಿಡಿ….

Promotion

ನವದೆಹಲಿ,ಮೇ,3,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ  ಆಕ್ಸಿಜನ್ ದುರಂತ ವಿಚಾರದಲ್ಲಿ ಕರ್ನಾಟಕ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಸರಣಿ ಟ್ವಿಟ್ ಮಾಡಲಾಗಿದ್ದು, 38 ಸಾವಿರ  ನೆಟ್ಟಿಗರು ಘಟನೆ ಕುರಿತು ಟ್ವಿಟ್ ಮಾಡಿದ್ದಾರೆ.jk

#karnataka ಹ್ಯಾಶ್ ಟ್ಯಾಗ್‌ನಲ್ಲಿ ಚಾಮರಾಜನಗರ ಘಟನೆ ಟ್ರೆಂಡ್ ಆಗಿದ್ದು, ಕ್ಷಣಕ್ಷಣಕ್ಕು ಟ್ವಿಟ್‌ಗಳು ಹೆಚ್ಚುತ್ತಲೆ ಇವೆ. ಇನ್ನು ಘಟನೆ ಖಂಡಿಸಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಟ್ವಿಟ್ ಮಾಡಿದ್ದಾರೆ.

ಈ ಮೂಲಕ ಚಾಮರಾಜನಗರ ಆಕ್ಸಿಜನ್ ಘಟನೆ ದೆಹಲಿ ಅಂಗಳಕ್ಕೆ ತಲುಪಿದೆ. ದುರಂತದ ಬಗ್ಗೆ ಟ್ವಿಟ್ ಮಾಡಿರುವ ರಾಹುಲ್ ಗಾಂಧಿ, ಇದು ಸಾವೋ ಅಥವಾ ಕೊಲೆಯೋ ಎಂದು ಪ್ರಶ್ನೆ ಮಾಡಿದ್ದಾರೆ.congress-leader-rahul-gandhi-tweet-chamarajanagar-incident

ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ದುರಂತದಂತೆ ಮತ್ತಷ್ಟು ಜನ ಬಳಲಬೇಕು.? ಮಲಗಿರುವ ವ್ಯವಸ್ಥೆ ಎದ್ದೇಳಬೇಕು ಎಂದು ಸರ್ಕಾರಕ್ಕೆ ರಾಹುಲ್ ಗಾಂಧಿ ಅವರು ಚಾಟಿ ಬೀಸಿದ್ದಾರೆ.

Key words: congress leader-Rahul Gandhi –tweet-Chamarajanagar- incident