ಕಾಂಗ್ರೆಸ್ ನಾಯಕ ದಿ. ಆರ್. ಧ್ರುವನಾರಾಯಣ್ ಅವರ ಪತ್ನಿ ನಿಧನ.

Promotion

ಮೈಸೂರು,ಏಪ್ರಿಲ್ ,7,2023(www.justkannada.in): ಕಾಂಗ್ರೆಸ್ ನಾಯಕ ದಿವಂಗತ ಆರ್. ಧ್ರುವನಾರಾಯಣ್ ಅವರ ಪತ್ನಿ ವೀಣಾ ಧ್ರುವನಾರಾಯಣ್  ಇಂದು ನಿಧನರಾಗಿದ್ದಾರೆ.

ಇತ್ತೀಚೆಗಷ್ಟೇ ಆರ್. ಧ್ರುವನಾರಾಯಣ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೀಗ ಆರ್.ಧೃವನಾರಾಯಣ್ ಅವರ ಪತ್ನಿ ವೀಣಾ ಧೃವನಾರಾಯಣ್ ಅವರೂ ಸಹ ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್  ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿಯಾಗಿ ಇವರ ಪುತ್ರ ದರ್ಶನ್ ಧ್ರುವನಾರಾಯಣ್ ಕಣಕ್ಕಿಳಿದಿದ್ದಾರೆ.

ಮಾರ್ಚ್ 11 ರಂದು ಆರ್.ಧೃವನಾರಾಯಣ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರು ನಿಧನರಾಗಿ ತಿಂಗಳು ತುಂಬುವ ಮೊದಲೇ ಮಡದಿಯೂ ಸಹ ಕೊನೆಯುಸಿರೆಳೆದಿದ್ದು, ಪುತ್ರ ದರ್ಶನ್ ಧ್ರುವನಾರಾಯಣ್ ಗೆ ಅಘಾತವನ್ನುಂಟು ಮಾಡಿದೆ.

Key words: Congress leader -R. Dhruvanarayan- wife -passed away.