ಬಸವರಾಜ ಬೊಮ್ಮಾಯಿ 7 PM ಸಿಎಂ..!.

congress-kpcc-m.lakshman-press.meet-Mysore

Promotion

ಮೈಸೂರು, ಜ.23, 2022 : (www.justkannada.in news) : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರದ ಬೆನ್ನಲ್ಲೇ, ಎಚ್.ಡಿ. ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ ಮಾಡಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು 7 ಪಿಎಂ ಸಿಎಂ ಎಂದು ಟೀಕಿಸಿದ್ದಾರೆ.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಇಂದು ಮೈಸೂರಲ್ಲಿ ನಡೆಸಿದ ತುರ್ತು ಪತ್ರಿಕಾಗೋಷ್ಠಿಯ ಸಂಪೂರ್ಣ ವಿವರ ಹೀಗಿದೆ…
ಜೆಡಿಎಸ್ ವಿರೋಧ ಪಕ್ಷ. ಆದರೆ ವಿರೋಧ ಪಕ್ಷದ ವಿರೋಧ ಪಕ್ಷವಾಗಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ನಿಮ್ಮನ್ನು ನೀವು ಒಕ್ಕಲಿಗರ ಚಾಂಪಿಯನ್ ಅಂದುಕೊಂಡಿದ್ದರು. ಆದರೆ ಒಕ್ಕಲಿಗರು ಜೆಡಿಎಸ್ ಬಿಟ್ಟು ಹೋಗುತ್ತಿದ್ದಾರೆ. ಒಕ್ಕಲಿಗರನ್ನು ನೀವು ಗುತ್ತಿಗೆ ತೆಗೆದುಕೊಂಡಿದ್ದೀರಾ.? ಜೆಡಿಎಸ್ ಫ್ಯಾಮಿಲಿ ಟ್ರಸ್ಟ್ ಅನ್ನೋದು ಸ್ಪಷ್ಟವಾಗಿ ಅರ್ಥವಾಗಿದೆ. ರಾಮನಗರ, ಚನ್ನಪಟ್ಟಣ ಕ್ಷೇತ್ರದಲ್ಲಿ ನಿಮ್ಮ ಕುಟುಂಬದ ಬದಲು ಬೇರೆಯವರಿಗೆ ಜೆಡಿಎಸ್ ಟಿಕೆಟ್ ನೀಡುತ್ತೇವೆಂದು ಘೋಷಣೆ ಮಾಡಿ.

ಜೆಡಿಎಸ್ ನ ಬಹುತೇಕ ಒಕ್ಕಲಿಗ ಸಮುದಾಯದ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಸದ್ಯದಲ್ಲೇ 15 ಮಂದಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ. ಅದರಲ್ಲಿ 10 ಮಂದಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಕಂತ್ರಿ ರಾಜಕಾರಣ ಮಾಡುತ್ತಿರುವವರು ಯಾರು ಎಂಬುದು ಜನರಿಗೆ ಗೊತ್ತಿದೆ.? ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿಕೆ.

ಮೈಸೂರು ಜಿಲ್ಲಾಡಳಿತ ಮಕ್ಕಳ ಸೋಂಕು ಕುರಿತಂತೆ ಅಂಕಿ ಅಂಶ ಮುಚ್ಚಿಡುತ್ತಿದೆ. ಮೈಸೂರಿನಲ್ಲಿ ಅತಿ ಹೆಚ್ಚು ಮಕ್ಕಳಿಗೆ ಸೋಂಕು ತಗಲುತ್ತಿದೆ. ಜಿಲ್ಲಾಡಳಿತ ಕೂಡಲೇ ಎಷ್ಟು ಮಕ್ಕಳಿಗೆ ಸೋಂಕು ತಗಲಿದೆ ಎಂಬ ಅಂಕಿ ಅಂಶ ಬಿಡುಗಡೆ ಮಾಡಲಿ. ಜಿಲ್ಲಾಡಳಿತ ಅಂಕಿಅಂಶವನ್ನ ಮುಚ್ಚಿಡುತ್ತಿದೆ. ಎಲ್ಲಾ ಶಾಲೆಗಳಲ್ಲೂ ಹತ್ತು- ಇಪ್ಪತ್ತು, ಐವತ್ತು ಸೋಂಕಿತ ಮಕ್ಕಳು ಕಂಡುಬರುತ್ತಿದ್ದಾರೆ. ಹೀಗಿರುವಾಗ ಯಾಕೆ ಶಾಲೆಗಳನ್ನ ಪ್ರಾರಂಭಿಸುತ್ತಿದ್ದೀರ‌.

ಜಿಲ್ಲಾ ಮಂತ್ರಿ ಮೈಸೂರಿಗೆ ಬಂದ ಮೇಲೆ ಒಂದು ನಯಾ ಪೈಸೆ ಅನುದಾನ ತಂದಿಲ್ಲ. ಮುಡಾ ಕಚೇರಿಯನ್ನ ರಿಯಲ್ ಎಸ್ಟೇಟ್ ಕಚೇರಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮುಡಾ ಭ್ರಷ್ಟಾಚಾರವನ್ನ ಬಯಲಿಗೆಳೆಯುತ್ತೇವೆ. ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎನ್.ಲಕ್ಷ್ಮಣ್ ಆರೋಪ.

ಬಸವರಾಜ ಬೊಮ್ಮಾಯಿ 7PM ಸಿಎಂ.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ. ರಾತ್ರಿ ಏಳು ಗಂಟೆ ನಂತರ ಅವರು ಯಾರಿಗೂ ಸಿಗೋದಿಲ್ಲ. ಯಾರೋ ಹಿರಿಯ ಸಚಿವರೊಬ್ಬರ ಬಳಿ ಟ್ಯೂಷನ್‌ಗೆ ಹೋಗುತ್ತಿದ್ದಾರೆ. ಗೃಹ ಸಚಿವರು ಮಾಧ್ಯಮ ಹೇಳಿಕೆಗೆ ಸೀಮಿತವಾಗಿದ್ದಾರೆ.


key words : congress-kpcc-m.lakshman-press.meet-Mysore