ಹೆಚ್ಚುವರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಠಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಡಿಮ್ಯಾಂಡ್…?

ಬೆಂಗಳೂರು,ಜ,17,2020(www.justkannada.in):   ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು ನಡೆಸುತ್ತಿದ್ದು ಈ ನಡುವೆ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ಬೆನ್ನಲ್ಲೆ ಮಾಜಿ ಸಿಎಂ ಸಿದ್ಧರಾಮಯ್ಯ ಹೆಚ್ಚುವರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಠಿ ಮಾಡುವಂತೆ ಪಕ್ಷದ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಒಂದು ಕಾರ್ಯಧ್ಯಕ್ಷ ಸ್ಥಾನವಿದ್ದು  ಆಸ್ಥಾನವನ್ನ ಈಶ್ವರ್ ಖಂಡ್ರೆ ನಿಭಾಯಿಸುತ್ತಿದ್ದಾರೆ. ಇನ್ನು ಮೂರು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ  ಸೃಷ್ಠಿಸಬೇಕು ನಾಲ್ಕು ಸಮುದಾಯದಿಂದ ನಾಲ್ಕು ಮಂದಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಲಿ ಎಂದು ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ನೀಡಿ ಅಭ್ಯಂತರವಿಲ್ಲ. ಆದರೆ ಹೆಚ್ಚುವರಿ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಠಿಸಿ ನಾಲ್ಕು ಕಾರ್ಯದ್ಯಕ್ಷ ಸ್ಥಾನ ಇರಲಿ . ಈ ಪೈಕಿ ಬೆಳಗಾವಿಯಿಂದ ಎಸ್ ಟಿ ಸಮುದಾಯಕ್ಕೆ ಸತೀಶ್ ಜಾರಕಿಹೊಳಿ,  ಬೆಂಗಳೂರಿನಿಂದ  ಮುಸ್ಲೀಂ ಸಮುದಾಯದಿಂದ ಜಮೀರ್ ಅಹ್ಮದ್ ಖಾನ್, ಮೈಸೂರಿನಿಂದ ಎಸ್ ಸಿ ಸಮುದಾಯದಿಂದ ಆರ್. ಧೃವನಾರಾಯಣ್ ಈ ನಾಲ್ವರ ಹೆಸರನ್ನ  ಕಾರ್ಯಾಧ್ಯಕ್ಷ  ಹುದ್ದೆಗೆ ಪರಿಗಣಿಸಿ. ಇದಿರಿಂದ ನಾಲ್ಕು ಕಡೆಯಿಂದ ಪಕ್ಷ ಸಂಘಟನೆಗೆ ಸಹಕಾರಿಯಾಗುತ್ತದೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Key words: congress- High Command-former cm-siddaramiah-kpcc-four-Creation