ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ: ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ- ಸಿಎಂ ಬೊಮ್ಮಾಯಿ ತಿರುಗೇಟು.

lockdown-extension-cm-decision-home-minister-basavaraja-bommai
Promotion

ಬೆಂಗಳೂರು,ಮೇ,7,2022(www.justkannada.in): ವಿಧಾನಸೌಧ ವ್ಯಾಪಾರಸೌಧ ಆಗಿದೆ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಪ್ರಿಯಾಂಕ್ ಖರ್ಗೆ ಮೂಲ ಕಾಂಗ್ರೆಸ್ಸಿಗರು. ಅವರಲ್ಲಿ ಭ್ರಷ್ಟಾಚಾರ ಕರಗತವಾಗಿದೆ ಪ್ರಿಯಾಂಕ್ ರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾವು ಹೇಗೆ ಆಡಳಿತ ನಡೆಸಬೇಕು ಎಂಬುದನ್ನು ಕಾಂಗ್ರೆಸ್ ನವರಿಂದ ಕಲಿಯಬೇಕಿಲ್ಲ. ಇನ್ನು ಪ್ರಿಯಾಂಕ್ ಖರ್ಗೆ ಏನೆಂದು ನಾನು ಹೇಳಬೇಕಿಲ್ಲ. ಅವರು ಹಲವು ದಶಕಗಳಿಂದ ಕಾಂಗ್ರೆಸ್ ನಲ್ಲಿಯೇ ಇದ್ದವರು. ಕಾಂಗ್ರೆಸ್ ಪಕ್ಷ ಏನೆಂಬುದು ಇಡೀ ನಾಡಿನ ಜನತೆಗೆ ಗೊತ್ತಿದೆ ಎಂದು ಕಿಡಿಕಾರಿದರು.lockdown-extension-cm-decision-home-minister-basavaraja-bommai

ಪಿಎಸ್ ಐ ಅಕ್ರಮದಲ್ಲಿ ಪ್ರಭಾವಿಗಳ ಕೈವಾಡವಿದೆ ಎಂಬ ಹೆಚ್.ಡಿಕೆ ಹೇಳಿಕೆಗೆ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ,  ಪ್ರಬಾವಿಗಳ ಬಗ್ಗೆ ದಾಖಲೆ ಕೊಟ್ಟರೇ ತನಿಖೆಯಲ್ಲಿ ಅಳವಡಿಸುತ್ತೇವೆ. ಯಾರು ಹೇಳಿಕೆ ಕೊಡ್ತಾರೋ ಅದಕ್ಕೆ ದಾಖಲೆ ಕೊಡಲಿ. ಅವುಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಸಿಐಡಿ ಅಧಿಕಾರಿಗಳು ಸಮರ್ಪಕವಾಗಿ ಪ್ರಕರಣದ ತನಿಖೆ ನಡೆಸಿದ್ದಾರೆ ಎಂದು ತಿಳಿಸಿದರು.

Key words: Congress-Gangotri-corruption-CM Bommai

ENGLISH SUMMARY….

Congress is the Gangotri of corruption: We don’t have to learn lessons from them – CM Bommai
Bengaluru, May 7, 2022 (www.justkannada.in): Responding to Congress MLA Priyank Kharge’s charges that the Vidhana Soudha has turned into a ‘Business Soudha,’ Chief Minister Basavaraj Bommai today said that the Congress is the Gangotri of corruption. “Priyank Kharge is a pure congress politician and corruption is deep-rooted in him. We don’t have to learn lessons from him,” he said.lockdown-extension-cm-decision-home-minister-basavaraja-bommai
Speaking to the press persons, in Bengaluru today, the Chief Minister expressed his view that the BJP people don’t have to learn how to run the government, from Congress. “I don’t have to tell anything about Priyank Kharge. He is in the Congress party for several decades. The people of the state know what is Congress party.”
Responding to a question on the allegations of involvement of influential people behind the PSI case, Basavaraj Bommai said that the government would include the names if the evidence is provided. “Let those who make charges also give evidence. The officials will investigate. The CID officials are investigating the case properly,” he added.
Keywords: Chief Minister Basavaraj Bommai/ Congress/ Priyank Kharge/ Gangotri of corruption