ಕಾಂಗ್ರೆಸ್ ಗಾಂಧಿ ಪರಿವಾರಕ್ಕೆ ಸೀಮಿತ: ಜೆಡಿಎಸ್ ತಂದೆ ಮಕ್ಕಳು ಮೊಮ್ಮಕ್ಕಳ ಪಕ್ಷ-ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕೆ.

Promotion

ಬೆಳಗಾವಿ,ಜನವರಿ,28,2023(www.justkannada.in): ಕಾಂಗ್ರೆಸ್ ಗಾಂಧಿ ಪರಿವಾರಕ್ಕೆ ಸೀಮಿತವಾದರೆ  ಜೆಡಿಎಸ್ ತಂದೆ ಮಕ್ಕಳು ಮೊಮ್ಮಕ್ಕಳ ಪಕ್ಷವಾಗಿದೆ. ಹೀಗಾಗಿ ಬಿಜೆಪಿ ಬೆಂಬಲಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಮನವಿ ಮಾಡಿದರು.

ಬೆಳಗಾವಿ ಜಿಲ್ಲೆಯ ಎಂ. ಕೆ ಹುಬ್ಬಳ್ಳಿಯಲ್ಲಿ ಬಿಜೆಪಿ ಸಂಕಲ್ಪ ಸಮಾವೇಶಕ್ಕೆ ರೋಡ್ ಶೋ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದರು. ರೋಡ್ ಶೋ ಮಧ್ಯೆ ಮಾತನಾಡಿದ ಅವರು,  ಡಬಲ್ ಇಂಜಿನ್ ಸರ್ಕಾರದ ಸಾಧನೆ  ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೋದಿ ಸರ್ಕಾರ ಅಭಿವೃದ್ದಿಗೆ ಶ್ರಮಿಸುತ್ತಿದೆ. ಕಾಂಗ್ರೆಸ್ ನಲ್ಲಿ ಅವಧಿಯಲ್ಲಿ ಭ್ರಷ್ಟಾಚಾರವಾಗಿದೆ.  ಕೈ ಹೈಕಮಾಂಡ್ ರಾಜ್ಯವನ್ನ ಎಟಿಎಂ ಮಾಡಿಕೊಂಡಿತ್ತು.  ಆದರೆ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಸುಳಿಯಲ್ಲ ಎಂದರು. ಅಯೋಧ್ಯಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಮೋದಿ ಸರ್ಕಾರ ಭಯೋತ್ಪಾದನೆಯನ್ನ ಮಟ್ಟ ಹಾಕಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ನೀಡುವಂತೆ ಅಮಿತ್ ಶಾ ಮನವಿ ಮಾಡಿದರು.

ಬಿಜೆಪಿಗೆ ಸಿಕ್ಕ ಬೆಂಬಲ ಕಂಡು ಕಾಂಗ್ರೆಸ್ ಗೆ ನಡುಕ- ಸಿಎಂ ಬೊಮ್ಮಾಯಿ,

ಬಿಜೆಪಿ ಸಂಕಲ್ಪ ಸಮಾವೇಶವನ್ನ ಅಮಿತ್ ಶಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಣಕಹಳ ಮೊಳಗಿಸಲು ರಾಜ್ಯಕ್ಕೆ ಮೋದಿ, ಅಮಿತ್ ಶಾ ಬರುತ್ತಿದ್ದಾರೆ. ಬಿಜೆಪಿಗೆ ಸಿಕ್ಕ ಬೆಂಬಲ ಕಂಡು ಕಾಂಗ್ರೆಸ್ ಗೆ ನಡುಕ.  ರಾಮನ ಹೆಸರು ಹೇಳಿದರೂ ಕಾಂಗ್ರೆಸ್ ಗೆ ನಡುಕ. ಮೋದಿ ಅಮಿತ್ ಶಾ ಬಂದರೂ ನಡುಕ. ಪ್ರಧಾನಿ, ಗೃಹ ಸಚಿವರ ಆಡಳಿತದಲ್ಲಿ ನಾವು ನೆಮ್ಮದಿ ಕಂಡಿದ್ದೇವೆ. ದೇಶದ ಹೊರಗಿನ ಆತಂಕವನ್ನ ಮೋದಿ ನಿವಾರಿಸುತ್ತಿದ್ದಾರೆ . ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಆಶೀರ್ವಾದಿಸಿ ಎಂದು ಮನವಿ ಮಾಡಿದರು.

Key words: Congress – Gandhi -family- Union -Home Minister- Amit Shah -criticizes.