ಕಾಂಗ್ರೆಸ್ ಗೆ ಕೇಂದ್ರ ಸರ್ಕಾರ ಪ್ರಶ್ನಿಸುವ ನೈತಿಕತೆ ಇಲ್ಲ- ಗೃಹ ಸಚಿವ  ಬಸವರಾಜ್ ಬೊಮ್ಮಾಯಿ ಕಿಡಿ…

Promotion

ಬೆಂಗಳೂರು, ಆ.29,2019(www.justkannada.in):  ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ತುರ್ತು ಪರಿಹಾರ ಕೈಗೊಂಡಿದೆ. ಕಾಂಗ್ರೆಸ್ ಗೆ ಕೇಂದ್ರ ಸರ್ಕಾರವನ್ನ ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕಿಡಿಕಾರಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಬಸವರಾಜ್ ಬೊಮ್ಮಾಯಿ,  ಪ್ರವಾಹ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಕೆಲಸಗಳು ಆಗುತ್ತಿವೆ.  ಸಮೀಕ್ಷೆ ನಡೆಸಿದ್ದೇವೆ. ಹೀಗಿದ್ದರೂ ಕಾಂಗ್ರೆಸ್ ನಾಯಕರ ಪ್ರತಿಭಟನೆ ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಂತ್ರಸ್ತರಿಗೆ ತುರ್ತು ನೆರವಾಗಿ ಹತ್ತು ಸಾವಿರ ರೂ. ನೀಡಲಾಗಿದೆ. ಪುನರ್ವಸತಿ ಮನೆ ನಿರ್ಮಾಣ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ಸಚಿವರು ಪ್ರವಾಹ ಭಾದಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿಸ್ಥಿತಿ ಅಧ್ಯಯನ ಮಾಡಿದ್ದೇವೆ. ಕೇಂದ್ರ ತಂಡ ಸಹ ಪ್ರವಾಸ ಮಾಡಿ ವಸ್ತುಸ್ಥಿತಿ ತಿಳಿದುಕೊಂಡಿದೆ. ಆದಷ್ಟು ಶೀಘ್ರ ನಮಗೆ ನೆರವು ದೊರೆಯಲಿದೆ. 2009ರಲ್ಲಿ  17 ಸಾವಿರ ಕೋಟಿ ನಷ್ಟ ಆಗಿತ್ತು. ಆದರೆ ಅಂದಿನ ಯುಪಿಎ ಸರ್ಕಾರ ಒಂದು ತಿಂಗಳ ಬಳಿಕ 500 ಕೋಟಿ ನೆರೆ ಪರಿಹಾರ ಕೊಟ್ಟಿತ್ತು. ಹೀಗಾಗಿ ಕೇಂದ್ರ ಸರ್ಕಾರವನ್ನ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ ಎಂದು ಟೀಕಿಸಿದರು.

Key words: Congress- does not – questioning – central government-Home Minister- Basavaraj Bommai