ನಾನು ಬರೆದುಕೊಡ್ತೀನಿ ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ‌- ಸಚಿವ ಅಶ್ವಥ್ ನಾರಾಯಣ್

Promotion

ಮೈಸೂರು,ಅಕ್ಟೋಬರ್,4,2021(www.justkannada.in): ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಯಾವುದೇ ಕಾರಣಕ್ಕೂ ಅಧಿಕಾರ ಮಾಡೋದೆ ಇಲ್ಲ‌ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಅಶ್ವತ್ ನಾರಾಯಣ್, ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲೇ ಒಡೆದು ನೂರು ಭಾಗವಾಗಿದೆ. ರಾಜ್ಯ ಕಾಂಗ್ರೆಸ್ ನಾಯಕತ್ವಕ್ಕೆ ಕಿತ್ತಾಟ ಶುರುವಾಗಿದೆ. ನಾನು ಬರೆದುಕೊಡ್ತೀನಿ ಯಾವ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ‌.  ನಮ್ಮ ಶಾಸಕರಾರು ಕಾಂಗ್ರೆಸ್‌ ಗೆ ಹೋಗಲ್ಲ ಎಂದು ನುಡಿದರು.

 ಮೋದಿ ಅಲೆ ವಿಚಾರ: ಡಿಕೆಶಿ ಮತ್ತು ದಳಪತಿಗಳಿಗೆ ಟಾಂಗ್.

ರಾಜ್ಯದಲ್ಲಿ ಮೋದಿ ಅಲೆ ಬಗ್ಗೆ ಬಿಎಸ್‌ ವೈ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಹಾಸನಕ್ಕೆ ಹೋಗಿ ಕೇಳಿದ್ರು ಶೇ 65% ಜನ‌ ಮೋದಿ ಪ್ರಧಾನಿ ಆಗಬೇಕು ಅಂತಾರೆ. ಕನಕಪುರಕ್ಕೂ ಹೋಗಿ ಕೇಳಿದ್ರು ಮೋದಿ ಹೇಸರೇಳ್ತಾರೆ. ಅಲ್ಲೆಲ್ಲೂ ಸ್ಥಳೀಯ ನಾಯಕರ ಹೆಸರೇಳಲ್ಲ‌. ನರೇಂದ್ರ ಮೋದಿ ಅಲೆ ಸದಾ ಇದ್ದೆ ಇರುತ್ತೆ ಎಂದು ಹೇಳುವ ಮೂಲಕ ಅಶ್ವಥ್ ನಾರಾಯಣ್ ದಳಪತಿಗಳು, ಡಿಕೆಶಿಗೆ ಟಾಂಗ್ ಕೊಟ್ಟರು.

ಬೈ ಎಲೆಕ್ಷನ್ ಉಸ್ತುವಾರಿಗಳ ಪಟ್ಟಿಯಲ್ಲಿ ವಿಜಯೇಂದ್ರಗೆ ಕೋಕ್  ಹಿನ್ನೆಲೆ ಈ ಬಗ್ಗೆ ಮಾತನಾಢಿದ ಅಶ್ವಥ್ ನಾರಾಯಣ್, ಯಾರನ್ನ ಕೈ ಬಿಟ್ಟಿದ್ದಾರೆ ಎಂಬುದು ಮುಖ್ಯವಲ್ಲ. ಬಿಜೆಪಿಯಲ್ಲಿ ಎಲ್ಲರೂ ಪ್ರಚಾರದಲ್ಲಿ ಭಾಗವಹಿಸಬಹುದು. ವಿಜಯೇಂದ್ರರನ್ನ ಪ್ರಚಾರಕ್ಕೆ ಬಳಸಿಕೊಳ್ತಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

Key words:  Congress -does not come – power – states- Minister- Ashwath Narayan

ENGLISH SUMMARY..

‘I am 100% confident, Cong. won’t come to power in state’: Minister Ashwathnarayana
Mysuru, October 4, 2021 (www.justkannada.in): Higher Education Minister Dr. Ashwathanarayana has informed that the Congress party will not come to power in the State at any cost.
Speaking to the press persons in Mysuru today he said, the Congress party is broken into 100 pieces at the national level itself. The Cong. leaders are fighting among themselves for leadership. I am 100% confident that the Congress party won’t come to power in Karnataka. Our MLAs won’t go to Congress.
Keywords: Minister Dr. Ashwathnarayana/ Congress party/ won’t come to power/ State