ಕಾಂಗ್ರೆಸ್ ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಕ್ರಮ ಖಚಿತ- ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ.

 

ಬೆಂಗಳೂರು,ಜನವರಿ,6,2022(www.justkannada.in):  ಕಾಂಗ್ರೆಸ್ ಪಾದಯಾತ್ರಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ. ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಕ್ರಮ ಖಚಿತ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಡಿಕೆ ಶಿವಕುಮಾರ್ ಮಂತ್ರಿಯಾಗಿ ಸರ್ಕಾರ ನಡೆಸಿದವರು. ಅವರೇ ಈಗ ಕೋವಿಡ ನಿಯಮ ಉಲ್ಲಂಘಿಸಿದರೆ ಹೇಗೆ. ಅವರೇ ಹೀಗೆ ಮಾತನಾಡಿದರೇ ಹೇಗೆ. ಕಾಂಗ್ರೆಸ್ ವಿವೇಚನೆ ಮಾಡಬೇಕು. ಕಾಂಗ್ರೆಸ್ ಪಕ್ಷದವರಿಗೆ ಒಂದು ನಿಯಮ ಬೇರೆಯವರಿಗೆ ಒಂದು ನಿಯಮ ಜಾರಿ ಮಾಡಿಲ್ಲ. ಬಿಜೆಪಿ ಸಭೆ ಕೂಡ ರದ್ಧಾಗಿದೆ ಎಂದರು.

ಕೋವಿಡ್ ಬಿಗಿ ನಿಯಮ ನಮಗೇನೂ ಖುಷಿ ಇಲ್ಲ.  ಕಾಂಗ್ರೆಸ್ ನಿಯಮ ಉಲ್ಲಂಘಿಸಿದರೇ ಕ್ರಮ ಖಚಿತ. ಪಾದಯಾತ್ರೆಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

Key words: Congress – covid rule-  Home Minister- Araga Jnanendra

ENGLISH SUMMARY…

If Congress violates COIVD rules we will definitely initiate action: Home Minister Araga Jnanendra
Bengaluru, January 6, 2022 (www.justkannada.in): Home Minister Araga Jnanendra has said that the government will not allow the Congress padayatra at any cost and has also warned that action would be taken if the Congress leaders goes ahead.
Speaking to the media persons in Bengaluru today, he said, “Siddaraiamah is a former Chief Minister. D.K. Shivakumar also was a minister. If they themselves violate rules, what should we say? The Congress leaders should have at least some sense. We can’t implement separate rules for Congress party people and another rule for others. Even the BJP meeting has also been canceled,” he informed.
Keywords: Home Minister/ Araga Jnanendra/ Congress/ Padayatra/ won’t allow