ಚುನಾವಣೆ ವೇಳೆ ಕಾಂಗ್ರೆಸ್ ಭ್ರಷ್ಟಾಚಾರ ಬಯಲು ಮಾಡುತ್ತೇವೆ- ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ.

Promotion

ಬೆಂಗಳೂರು,ಸೆಪ್ಟಂಬರ್,23,2022(www.justkannada.in):  ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದು ಇದೀಗ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು,  ಸರ್ಕಾರದ ವಿರುದ್ದ ಕಮಿಷನ್ ಆರೋಪ ಮಾಡಿದ್ದಾರೆ.  ದಾಖಲೆ ಇಲ್ಲದೆ ಕಾಂಗ್ರೆಸ್ ಆರೋಪ ಮಾಡಿದೆ.  ದಾಖಲೆ ಇದ್ರೆ ಲೋಕಾಯುಕ್ತಕ್ಕೆ ಕೊಡಲಿ.  ರಾಜ್ಯದ ಜನ ಜಾಗೃತರಾಗಿದ್ದಾರೆ ಎಂದರು.

ಕಾಂಗ್ರೆಸ್ ನಾಯಕರು ಹಾಸಿಗೆ ದಿಂಬನ್ನೂ ಬಿಟ್ಟಿಲ್ಲ. ಕಾಮಗಾರಿ ಮಾಡದೇ 38 ಕೋಟಿ ಹಣ ಪಡೆದಿದ್ದರು. 100 ಪರ್ಸೆಂಟ್ ಕಮಿಷನ್  ಕಾಂಗ್ರೆಸ್  ಕಾಂಗ್ರೆಸ್ ನದ್ದು, ಆದರೆ ನಮ್ಮ ಬಗ್ಗೆ ಆರೋಪ ಮಾಡುತ್ತಾರೆ. ಚುನಾವಣೆ ವೇಳೆ ನಿಮ್ಮ ಭ್ರಷ್ಟಾಚಾರ ಬಯಲು ಮಡುತ್ತೇವೆ ಎಂದು ಲಕ್ಷ್ಮಣ್ ಸವದಿ ಕಿಡಿಕಾರಿದರು.

Key words: Congress- corruption – exposed -during –elections-Laxman Savadi.