ಭ್ರಷ್ಟಾಚಾರ ಹುಟ್ಟಿಹಾಕಿದ್ದೇ ಕಾಂಗ್ರೆಸ್ : ಡಿನೋಟಿಫಿಕೇಷನ್, ಪಿಎಸ್ ಐ ಸ್ಕ್ಯಾಮ್ ಆಗಿದ್ದೇ ಅವರ ಕಾಲದಲ್ಲಿ- ಸಚಿವ ಸುಧಾಕರ್ ವಾಗ್ದಾಳಿ.

ಬೆಂಗಳೂರು,ಜನವರಿ,23,2023(www.justkannada.in):  ರಾಜ್ಯದಲ್ಲಿ ಭ್ರಷ್ಟಾಚಾರ ಹುಟ್ಟಿ ಹಾಕಿದ್ದೇ ಕಾಂಗ್ರೆಸ್. ಯಾವುದೇ ಯೋಜನೆ ಮಾಡಿದರೂ ಭ್ರಷ್ಟಾಚಾರ ಮಾಡುತ್ತಿದ್ದರು. : ಡಿನೋಟಿಫಿಕೇಷನ್, ಪಿಎಸ್ ಐ ಸ್ಕ್ಯಾಮ್ ಆಗಿದ್ದೇ ಅವರ ಕಾಲದಲ್ಲಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದರು.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್,  ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಈಗ ನಮ್ಮ ವಿರುದ್ಧ ಭ‍್ರಷ್ಟಾಚಾರ ಆರೋಪ. ಮಾಡುತ್ತಿದ್ದಾರೆ ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೇವೆ ಅಂದರು ಆದರೆ  ರಾತ್ರೋ ರಾತ್ರಿ ಲೋಕಾಯುಕ್ತ ಮುಚ್ಚಿ ಹಾಕಿದರು.  ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿದವು ಎಂದು ಕಿಡಿಕಾರಿದರು.

10 ಸಾವಿರ ಬೆಮಗಳೂರು ನಿವಾಸಿಗಳಿಗೆ ಅನ್ಯಾಯ ಮಾಡಿದರು.  900 ಎಕರೆಗೂ ಹೆಚ್ಚು ಡಿನೋಟಿಫಿಕೇಷನ್  ಕೇಸ್ ನಲ್ಲಿ ಭಾಗಿಯಾಗಿದ್ದರು. ಇದಕ್ಕಾಗಿ ಲೋಕಾಯುಕ್ತವನ್ನೇ ಮುಚ್ಚಿದರು ಎಂದು ಸುಧಾಕರ್ ಆರೋಪಿಸಿದರು.

ನಮ್ಮ ಇಲಾಖೆ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿದರು. ಆದರೆ ಅವರ ಬಳಿ ಸಾಕ್ಷಿ  ದಾಖಲೆಗಳಿಲ್ಲ.  ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ.  ಲ್ಯಾಪ್ ಟಾಪ್ ನಲ್ಲೂ ಭ್ರಷ್ಟಾಚಾರ ಆಗಲಿಲ್ವಾ. 2017ರಲ್ಲಿ ಸಿದ್ಧರಾಮಯ್ಯರವರ  ಾಪ್ತನ ಮೇಲೆ ರೇಡ್. ಆಗ ಹೈಕಮಾಂಡ್ ಗೆ ಹಣ ಸಂದಾಯ ಮಾಡಿದ್ದು ಬಹಿರಂಗವಾಗಿತ್ತು.  ಹೈಕಮಾಂಡ್ ಗೆ ಹಣ ಹೇಗೆ ಹೋಯ್ತು…? ಬಜೆಟ್ ಮೂಲಕವೇ ಹಣ ಹೋಯ್ತಾ..? ಪಿಎಸ್ ಐ  ಸ್ಕ್ಯಾಮ್ ಆಗಿದ್ದು ನಿಮ್ಮ ಕಾಲದಲ್ಲೇ. ಕಸ ವಿಲೇವಾರಿ ಮಾಡುವುದರಲ್ಲೂ ಭ್ರಷ್ಟಾಚಾರ ಮಾಡಿದ್ರಿ ಎಂದು ಸುಧಾಕರ್ ವಾಗ್ದಾಳಿ ನಡೆಸಿದರು.

Key words:  Congress –corruption-Denotification- PSI – scam – Minister- Sudhakar