ಪೆಟ್ರೋಲ್,  ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸೈಕಲ್ ಜಾಥಾ: ಸಾಮಾಜಿಕ ಅಂತರ ಮರೆತ ‘ಕೈ‘ ನಾಯಕರು…

Promotion

ಬೆಂಗಳೂರು,ಜೂ,29,2020(www.justkannada.in):  ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವುದನ್ನ ಖಂಡಿಸಿ ರಾಜ್ಯ ಕಾಂಗ್ರೆಸ್ ನಿಂದ ಇಂದು ಸೈಕಲ್ ಜಾಥಾ ನಡೆಯುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಕಚ್ಚಾತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಸೈಕಲ್ ಏರಿ ಬೀದಿಗಿಳಿದಿದ್ದು ಸೈಕಲ್ ಜಾಥಾದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕ ಜಮೀರ್ ಅಹ್ಮದ್ ಖಾನ್ ಭಾಗಿಯಾಗಿದ್ದಾರೆ.congress-condemn-petrol-diesel-price-hike-cycle-jatha

ಈ ನಡುವೆ ಸೈಕಲ್ ಜಾಥಾದ ವೇಳೆ ಕಾಂಗ್ರೆಸ್ ನಾಯಕರು ಕರೋನಾ ಜಾಗೃತಿ ನಿಯಮ ಉಲ್ಲಂಘಿಸಿದ್ದಾರೆ. ಸೈಕಲ್ ಚಳುವಳಿ ವೇಳೆ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ತೆರಳುತ್ತಿರುವ ಆರೋಪ ಕೇಳಿ ಬಂದಿದೆ. ಇನ್ನು ಸೈಕಲ್ ಜಾಥಾದಿಂದಾಗಿ ಕ್ವೀನ್ಸ್ ರಸ್ತೆಯಲ್ಲಿ ಸಾರ್ವಜನಿಕರು ಟ್ರಾಫಿಕ್ ಕಿರಿಕಿರಿ ಅನುಭವಿಸಿದ್ದು ಆಂಬ್ಯುಲೆನ್ಸ್ ವೊಂದು ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿದೆ.

Key words: Congress – condemn- petrol – diesel -price- hike- cycle jatha