ರಾಜ್ಯಪಾಲರಿಗೆ ಕಾಂಗ್ರೆಸ್ ನೀಡಿರುವ ದೂರು ಹಾಸ್ಯಸ್ಪದ ಮನವಿ- ಸಿಎಂ ಬೊಮ್ಮಾಯಿ ಟೀಕೆ.

Promotion

ದಾವಣಗೆರೆ,ನವೆಂಬರ್,26,2021(www.justkannada.in):  ಗುತ್ತಿಗೆದಾರರ  ಪತ್ರವನ್ನಿಟ್ಟುಕೊಂಡು ರಾಜ್ಯಪಾಲರಿಗೆ ಕಾಂಗ್ರೆಸ್  ನೀಡಿರುವ ದೂರು ಅತ್ಯಂತ ಹಾಸ್ಯಾಸ್ಪದ ಮನವಿಯಾಗಿದೆ ಎಂದು  ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

ದಾವಣಗೆರೆಯಲ್ಲಿ  ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕಾಂಟ್ರಕ್ಟರ್ ಗಳಿಗೆ ಯಾವ ಅವಧಿಯಲ್ಲಿ ಪರ್ಸೆಂಟೇಜ್​ ಅನುಭವ ಆಗಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿಲ್ಲ. ಪರ್ಸೆಂಟ್ ಜನಕರಿದ್ದರೇ  ಅದು ಕಾಂಗ್ರೆಸ್ ನವರು. ಆ ಪರ್ಸೆಂಟ್ ಜಾಸ್ತಿಯಾಗಿದ್ದರೇ  ಅದು ಕಾಂಗ್ರೆಸ್ ಕಾಲದಲ್ಲಿಯೇ. ಇತ್ತೀಚೆಗೆ ಪರ್ಸೆಂಟೇಜ್ ಬಗ್ಗೆ ಮಾತನಾಡಿದ ವಿಡಿಯೋ ಪ್ರಚಾರ ಆಗಿದ್ದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು.

ಗುತ್ತಿಗೆದಾರರು ಕೊಟ್ಟಿರುವ ಪತ್ರದಲ್ಲೇ ಸ್ಪಷ್ಟತೆ ಇಲ್ಲ. ಯಾವ ಕಾಲದಲ್ಲಿ ಆಗಿದೆ ಎಂಬ ಮಾಹಿತಿಯೂ ಪತ್ರದಲ್ಲಿಲ್ಲ. ಹಾಗಾಗಿ ಕಾಂಗ್ರೆಸ್ ಅವಧಿಯ ಟೆಂಡರ್ ಗಳನ್ನೂ ತನಿಖೆ ಮಾಡಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ  ತಿಳಿಸಿದರು.

Key words: Congress-complaint – governor – ridiculous- appeal – CM Bommai