ಸ್ಪೀಕರ್ ವಿರುದ್ದ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ಹಿನ್ನೆಲೆ: ಸಚಿವ ಮಾಧುಸ್ವಾಮಿ ಆಕ್ರೋಶ…

ಬೆಂಗಳೂರು,ಮಾ,4,2020(www.justkannada.in): ದೊರೆಸ್ವಾಮಿ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಗೆ  ಅವಕಾಶ ನೀಡುತ್ತಿಲ್ಲವೆಂದು ಸ್ಪೀಕರ್ ವಿರುದ್ದ ಕಾಂಗ್ರೆಸ್ ದೂರು ನೀಡಿದ ಹಿನ್ನೆಲೆ ಕಾನೂನು ಸಚಿವ ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ವಿರುದ್ದ ಕಾಂಗ್ರೆಸ್ ನಿಯೋಗ ದೂರು ನೀಡಿದ್ದನ್ನ ಪ್ರಸ್ತಾಪಿಸಲಾಯಿತು.  ಈ ವೇಳೆ  ಸ್ಪೀಕರ್ ವಿರುದ್ದ ದೂರು ನೀಡಿದ್ದಕ್ಕೆ ಕ್ಷಮೆ ಕೋರುವಂತೆ ಕಾಂಗ್ರೆಸ್ ಗೆ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಆಗ್ರಹಿಸಿದರು.

ಈ ನಡುವೆ ಸ್ಪೀಕರ್ ವಿರುದ್ದ ದೂರಿನ ಬಗ್ಗೆ ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ ಮತ್ತು ಹ್ಯಾರಿಸ್ ಸಮರ್ಥಿಸಿಕೊಂಡರು. ಇದೇ ಸಮಯದಲ್ಲಿ ಕಾಂಗ್ರೆಸ್ ನಡೆಗೆ ಆಕ್ರೋಶ ಹೊರಹಾಕಿದ ಕಾನೂನು ಸಚಿವ ಮಾಧುಸ್ವಾಮಿ, ರಾಜ್ಯಪಾಲರು ಅಂದು ಮೂರು ಬಾರಿ ಬಹುಮತಕ್ಕೆ ಆದೇಶಿಸಿದ್ದರು.  ಆದರೆ ಕಾಂಗ್ರೆಸ್ ರಾಜ್ಯಪಾಲರಿಗೆ ಗೌರವ ಕೊಡಲಿಲ್ಲ. ಆವಾಗ ಬೇಡವಾದ ರಾಜ್ಯಪಾಲರು ಈಗ ಬೇಕಾಯ್ತಾ..? ಕಾಂಗ್ರೆಸ್ ಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

Key words: Congress -complaint – Governor -against – Speaker-Minister –Madhuswamy- outrage